KANNADA QUOTES




⁠⁠⁠⁠🆚ಊಟ ಎಲ್ಲರಿಗೂ ಬೇಕು ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ 🆚‌‌‌‌‌‌‌‌ನೀರು ಎಲ್ಲರಿಗೂ ಬೇಕು ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರು ಪ್ರಯತ್ನಿಸುವುದಿಲ್ಲ 🆚ಪಾಲು ಎಲ್ಲರಿಗೂ ಬೇಕು ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ. 🆚ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ 🆚ಹೆಂಡತಿ ಎಲ್ಲರಿಗು ಬೇಕು ಆದರೆ ಹೆಣ್ಣು ಮಕ್ಕಳು ಯಾರಿಗು ಬೇಡ 🆚 ಈ ಸಂದೇಶವನ್ನು ಓದಿ ವಾಹ್ ವಾಹ್ !!! ಅನ್ನುವವರು ಇರುತ್ತಾರೆ ಹೂರತು ಓದಿ ಬೆರೆಯವರಿಗೆ ಕಳಿಸಿ ಅರಿವು ಮೂಡಿಸುವ ಪ್ರಯತ್ನ ಯಾರೂ ಮಾಡುವುದಿಲ್ಲ
-----------------------orchid-a----------------------------------
ಕಾಲ ಯಾವತ್ತು ಒಂದೇ ರೀತಿ ಇರಲ್ಲ, ಈದಿನ ಸೋತವರು ನಾಳೆ ಗೆಲ್ಲ್ತಾರೆ. ಕಾಲ ನಮಗಾಗಿ ಕಾಯಲ್ಲ, ಕಾಲದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಧೃಡ ಮನಸ್ಸಿನಿಂದ ಮುನ್ನಡೆದರೆ ಗೆಲುವಿನ ಬಾಗಿಲು ನಮಗಾಗಿ ತೆರೆದಿರುತ್ತದೆ‌. ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ, ಆದರೆ ಕಷ್ಟಪಟ್ಟು ಏರಿದರೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ. ನಡೆ, ಮುನ್ನಡೆ
-----------------------orchid-a----------------------------------

🌞🍃 ಸುಪ್ರಭಾತ 🍃🌞🍃 ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ.. 👏🤗 ಶುಭೋದಯ 🤗👏
----------------------orchid-a------------------------------------

🍁ಬಾಳಿಗೊಂದು ಬಂಗಾರದಂಥ ಮಾತು🍁 # ನನಗೆ 6 ವರ್ಷವಿದ್ದಾಗ ಅರೆ,ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ ! ಎಂದು ಆಗ ಅನಿಸುತ್ತಿತ್ತು. # 10 ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ # 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು # 16 ನೇ ವಯಸ್ಸಿಗೆ ಬಂದಾಗಂತೂ ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ # 19 ನೇ ವಯಸ್ಸಿನಲ್ಲಿ ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು # 21 ಕ್ಕೆ ಬಂದೆನಾ ಅಪ್ಪ ವಿಪರೀತ ಬಿಗಿಯಾದವನಂತೆ, ತೀರಾ ಒರಟನಂತೆ ಕಂಡ. # 22 ನೇ ವಯಸ್ಸಿನಲ್ಲಿ ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ. ಅವನೇನು ಮಹಾ ? 25 ನೇ ವಯಸ್ಸಿಗೆ, "ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿ, ಅವನಿಗೇನು ಗೊತ್ತು ?" ಅಂದುಕೊಂಡೆ. # 30 ರಲ್ಲಿದ್ದಾಗ ಮದುವೆಯಾದೆ, ಆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ. ಈ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು. # 35 ನೇ ವಯಸ್ಸಿನಲ್ಲಿ ನನ್ನ ಮಗ/ಮಗಳ ರಂಪ ಕಂಡು ತಲೆ ಚಿಟ್ಟು ಹಿಡಿಯಿತು. # 39 ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ, ಅಪ್ಪ ನೆನಪಾದ. # 42 ನೇ ವಯಸ್ಸಿನಲ್ಲಿ ಅನಿಸಿದ್ದು, ಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ. # 45 ರ ವಯಸ್ಸಲ್ಲಿ ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ. # 50 ರಲ್ಲಿದ್ದಾಗ ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟ, ಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ? # 58 ನೇ ವಯಸ್ಸಿನಲ್ಲಿ ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರು. ಅಪ್ಪನ ನೆನೆದು ಅಳು ಬರುತ್ತಿತ್ತು # ಕಡೆಗೂ ಹಳೆಯದೆಲ್ಲಾ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು, # ಅಪ್ಪಾ U R ಗ್ರೇಟ್ # ಅಂದಾಗ, ನನಗೆ 60 ವರ್ಷ ತುಂಬಿತ್ತು. # ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು ಖ್ಯಾತ ಲೇಖಕರಾದ: ಶ್ರೀ ಮಣಿಕಾಂತ ಅವರ "ಅಪ್ಪ ಅಂದ್ರೆ ಆಕಾಶ" ಪುಸ್ತಕದಿಂದ ಪಡೆದದ್ದು.

----------------------------orchid-a------------------------------------------

ಕೊಂಚ ಆಲೋಚಿಸಿ ನೋಡಿ●
"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"
ಕೊಂಚ ಆಲೋಚಿಸಿ ನೋಡಿ●
"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"
ಕೊಂಚ ಆಲೋಚಿಸಿ ನೋಡಿ●
"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ"
----------Orchid---------------
ಕೆಳಕಂಡ ಸಂದೇಶಗಳನ್ನು ಸೃಷ್ಟಿಸುವವರು ಹಾಗೂ ಹಂಚುವವರನ್ನು ಮೂಢರು ಎಂದು ಪರಿಗಣಿಸಿ ಮೂರ್ಖರ ಪಟ್ಟಿಗೆ ಸೇರಿಸಿ ಬಿಡುವುದು ಒಳ್ಳೆಯದು ..
1) ಈ ಚಿತ್ರದಲ್ಲಿರುವ ಮಗುವಿಗೆ ಹೃದಯದ ಕಾಯಿಲೆ ಇದೆ , ನೀವು ಈ ಪೋಸ್ಟನ್ನು ಶೇರ್ ಮಾಡಿದರೆ ಫೇಸ್ಬುಕ್ ಅಥವಾ ವಾಟ್ಸ್ಅಪ್ ಅಥವಾ ಮೊಬೈಲ್ ಕಂಪನಿ 10/20 ಪೈಸೆ ಅಥವಾ ಒಂದು ಡಾಲರ್ ನೀಡುವುದು .
ಸಂದೇಹ: ಕಂಪನಿ ಇವ್ರ ತಾತನದ್ದಾ ?
2) ಓಂ ಶಿವಾಯ, ಓಂ
ಶನೀಶ್ವರಾಯ ,ಓಂ ಗಣೇಶ್ವರಾಯ ,ದೀಕ್ಷಿತಾಯ ನಮಃ ,ಜೀಸಸ್ ನೆವರ್ ಫೈಲ್ಸ್ ಇದನ್ನು 10 ಮಂದಿಗೆ ಕಳುಹಿಸಿ ಇಲ್ಲಾ
ಅಂದ್ರೆ ನಿಮಗೆ ಕೆಟ್ಟಕಾಲ ಶುರುವಾಗುತ್ತೆ ..
ಸಲಹೆ : ದಯವಿಟ್ಟು ಇದನ್ನು 10 ಜನಕ್ಕೆ ಕಳುಹಿಸಿದ ಮೇಲೆ ಕೆಟ್ಟಕಾಲ ಶುರುವಾಗಿ ನೀವು ಹೀಗಾಗಿರಬೇಕು ನಾನು ಸರಿ ಇದ್ದೇನೆ .ಭಕ್ತಿಯನ್ನು ದುರುಪಯೋಗಪಡಿಸಬೇಡಿ .
3) ಈ ಹುಡುಗಿಯ ಅಸ್ಪಷ್ಟ ಚಿತ್ರವನ್ನು ಮುಂದಿನ ಗ್ರೂಪ್ ಗೆ ಕಳುಹಿಸಿ ನಿಮಗೆ ಸ್ಪಷ್ಟವಾಗಿ ಕಾಣಿಸುತ್ತೆ .
ಕೋರಿಕೆ : ನಿಮಗೆ ಸ್ಪಷ್ಟವಾಗಿ ಕಾಣಿಸಿದ ಚಿತ್ರದ scrಈnshot ಕಳುಹಿಸಿಕೊಡಿ .
4) ಬ್ಯಾಟರೀ ಸಿಂಬಲ್ 10 ಸಲ ಪೇಸ್ಟ್ ಮಾಡಿ , ಇದನ್ನು 10 ಜನಕ್ಕೆ ಕಳುಹಿಸಿಕೊಡಿ ನಿಮ್ಮ ಬ್ಯಾಟರಿ ಚಾರ್ಜ್ ಫುಲ್ ಆಗುತ್ತೆ .
ವಿನಂತಿ : ನಿಮ್ಮ ಮೊಬೈಲ್ ಹಂಗೇ ಚಾರ್ಜ್ ಮಾಡ್ಕೊಳ್ಳಿ , ನಿಮ್ ಚಾರ್ಜರ್ ನನಗೆ ಕೊಟ್ಟುಬಿಡಿ , ಆಫೀಸಿಗೊಂದು ಮನೆಯಲ್ಲೊಂದು ಆಗುತ್ತೆ .
5) ಈ ಚಿತ್ರದಲ್ಲಿರುವ ವ್ಯಕ್ತಿಯ ಕೈಅಲ್ಲಿರುವ ಮಗುವು ಆತನದ್ದು ಅಲ್ಲಾ ಅನಿಸುತ್ತೆ ಕೂಡಲೇ ಶೇರ್ ಮಾಡಿ .
ಪ್ರಶ್ನೆ : ಮಗು ಅಪ್ಪನ ಬಣ್ಣವೇ ಇರಬೇಕು ಅಂತಾ ನಿಯಮ ಇದ್ಯಾ ?
6) ಈ ಹುಡುಗಿ ಆ ಹುಡುಗನೊಂದಿಗೆ ಓಡಿ ಹೋಗಿದ್ದಾಳೆ , ಶೇರ್ ಮಾಡಿ ಅವರ ಮನೆಯವರಿಗೆ ಸಂದೇಶ ತಲುಪಲಿ .
ಸಂದೇಹ : ಮನೆಯವರು ಮಂಗಳ ಗ್ರಹದಲ್ಲಿ ಇರುವುದೋ
7) ಈ ಕೆಳಗಿನ ಲಿಂಕ್ ಅನ್ನು 10 ಜನರಿಗೆ ಕಳುಹಿಸಿ ಆಪಲ್ ಫೋನ್ ಸಿಗುತ್ತೆ .
ಸೂಚನೆ : ನನಗೆ ಆಪಲ್ ಬೇಡ ದ್ರಾಕ್ಷಿ ಫೋನ್ ಕೊಡ್ತೀರಾ ಅಂದ್ರೆ ಶೇರ್ ಮಾಡ್ತೀನಿ ..
ದಯವಿಟ್ಟು ಇಂತಹಾ ಸಂದೇಶಗಳನ್ನು ಕಳುಹಿಸಿ ನನ್ನ ಮಂಡೆ ಬೆಚ್ಚ ಮಾಡಬೇಡಿ ಗೊತ್ತಾಯ್ತ ..
ಈ  ಸಂದೇಶವನ್ನು 10 ಜನಕ್ಕೆ ಕಳುಹಿಸಿ ನಿಮ್ಮ ಗುಂಪಿನಲ್ಲಿ ಅಥವಾ ಖಾತೆಯಲ್ಲಿರುವ ಶಿಕ್ಷಿತ ಮೂರ್ಖರನ್ನು ಜಾಗೃತಿಗೊಳಿಸಿ

.

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

1 comment: