Kannada Small Stories



ಕಾಲ ಯಾವಾಗ ಬದಲಾಯಿತೋ ಗೊತ್ತೇ ಆಗಲಿಲ್ಲ 🕐🕤🕧 "ಮನೆ ಮಂದಿಯೆಲ್ಲಾ ಒಂದೇ ಸಾಬೂನು, ಉಪಯೋಗಿಸುತ್ತಿದ್ವಿ" ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು ಯಾವತ್ತೋ ಒಂದು ದಿನ ಮಾಡುತ್ತಿದ್ದ ವಿಶೇಷ ತಿಂಡಿಗಳ ರುಚಿ ಈಗ ಇಲ್ಲ ಬೆಲ್ಲ ಕ್ಯಾಂಡಿ ತಿನ್ನೋದು ಯಾವಾಗಲೋ ನಿಲ್ಲಿಸಿದೆವು ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ ಇದ್ದೆವು ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಾಯಿಲೆ ಅಂದ್ರೆ ಇವಷ್ಟೇ ಆಗಿತ್ತು ಸಕ್ಕರೆ ಖಾಯಿಲೆ ಆವಾಗ ಶ್ರೀಮಂತರಿಗೆ ಮಾತ್ರ ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು *ಲಗೋರಿ, ಮರಕೋತಿ ಆಟ,ಚಿನ್ನಿದಾಂಡು ಕ್ರಿಕೆಟ್ ಹುಡುಗರಿಗೆ ಕುಂಟಾಬಿಲ್ಲೆ, ಕೊಕೊ,ಚೌಕಾಬರ, ಹುಡುಗಿಯರ ಆಟ ಆಗಿತ್ತು* ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ ಆದಿತ್ಯವಾರ ಗಂಡುಮಕ್ಕಳು ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದರು ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್ ದೊಡ್ಡೋರ ಅಂಗಿ ಸಣ್ಣವರಿಗೆ ಬಳುವಳಿಯಾಗಿ ಬರುತ್ತಿತ್ತು ಮಳೆ ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಬರುವಾಗ ಜೋರಾಗಿ ಹೊಡಿತ್ತಿತ್ತು ಆಮೇಲೆ ದಿನ ಇಡೀ ಜಿಟಿಜಿಟಿ ಸುರಿತಾ ಇತ್ತು ಮಗ್ಗಿ ಹೇಳೋದೇ ದೊಡ್ಡ ಅಸೈನ್ಮೆಂಟೂ ಗುಬ್ಬಿ ಮನೆ ಅಂಗಳದಲ್ಲೇ, ಸಂಜೆ ಆದ್ರೆ ಬೇರೆ ಬೇರೆ ಸದ್ದಿನ ಹಕ್ಕಿಗಳು ಟ್ರಾಫಿಕ್ ಜಾಮ್ ಕೇಳಿ ಗೊತ್ತಿತ್ತು ನೋಡಿ ಗೊತ್ತಿರಲಿಲ್ಲ ತರಕಾರಿ ತರೋದಕ್ಕೆ ಕೈ ಚೀಲ ನಾವೇ ತಗೊಂಡು ಹೋಗ್ತಾ ಇದ್ದೆವು ಯಾರಿಗಾದರು ನೋವಾದರೆ ನಮಗೂ ದುಃಖ ಆಗ್ತಾ ಇತ್ತು, ಸ್ಮೈಲಿ/ಇಮೋಜಿ ಕಳುಹಿಸುತ್ತಾ ಇರ್ಲಿಲ್ಲ ಮನೆಮಂದಿ ಒಟ್ಟಿಗೆ ಕೂತು ಮಾತಾಡೋದೆ ವಾಟ್ಸಪ್ ಗ್ರೂಪ್ ಆಗಿತ್ತು ಫೋಟೊ ತೆಗೆದ್ರೆ ಕ್ಲೀನ್ ಆಗಿ ಬರೋಕೆ ಕಾಯ್ತಾ ಇದ್ದೆವು ಪೇಪರಿನಲ್ಲಿ ಅಪಘಾತದಂಥಾ ಸುದ್ದಿ ಬಂದ್ರೆ ಮರುಗುತ್ತಿದ್ದೆವು. ಒಬ್ರು ಯಾರೋ ಫೇಸ್ ಬುಕ್ ಥರಾ ಎಲ್ಲಾ ವಿಷಯ ಮನೆಗೆ ಬಂದು ಅಪ್ಲೋಡ್ ಮಾಡ್ತಾ ಇದ್ದರು/ ಅದೇ ಮನೆಯಿಂದ ವಿಷಯ ಡೌನ್ಲೋಡ್ ಕೂಡಾ ಮಾಡ್ತಾ ಇದ್ರು ಅಂಗಡಿ ಶೆಟ್ರಿಗೆ, ಊರ ಡಾಕ್ಟ್ರಿಗೆ, ಶಾಲಾ ಮಾಸ್ತರಿಗೆ ಮನೆಯವರೆಲ್ಲರ ಪರಿಚಯ ಮತ್ತು ವಿಷಯ ತಿಳಿದಿತ್ತು ಕಾಲ ಬದಲಾಗಿದ್ದು ಗೊತ್ತೇ ಆಗ್ಲಿಲ್ಲ... ಆದರೆ ನೆನಪುಗಳು ಇನ್ನೂ ಡಿಲೀಟ್ ಆಗಿಲ್ಲ.... ಡಿಲೀಟ್ ಆಗೊ ಮೊದಲು ಈ ಸಂದೇಶನಾ ಎಲ್ಲಾ ಸ್ನೇಹಿತರಿಗೂ ಹಂಚಿ ಬಿಡಿ ಪ್ಲೀಸ್ 😍😍😍 ಸವಿ ನೆನಪು

-------------------------orchid-a-----------------------------------------------------


ಹುಟ್ಟು: ನಾವು ಕೇಳದೇ ಸಿಗುವ ವರ ಸಾವು: ನಾವು ಹೇಳದೇ ಹೋಗುವ ಜಾಗ ಬಾಲ್ಯ: ಮೈಮರೆತು ಆಡುವ ಸ್ವರ್ಗ. ಯೌವನ: ಅರಿವಿದ್ದರೂ ಅರಿಯದ ಮಾಯೆ. ಮುಪ್ಪು: ಕಡೆಯ ಆಟ. ಸ್ನೇಹ: ಶಾಶ್ವತವಾಗಿ ಉಳಿಯೋ ಬಂಧ. ಪ್ರೀತಿ: ಪ್ರಾಣಕ್ಕೆ ಹಿತವಾದ ಅನುಬಂಧ. ಪ್ರೇಮ: ತ್ಯಾಗಕ್ಕೆ ಸ್ಪೂರ್ತಿ. ಕರುಣೆ: ಕಾಣುವ ದೇವರು. ಮಮತೆ: ಕರುಳಿನ ಬಳ್ಳಿ. ದ್ವೇಷ: ಉರಿಯುವ ಕೊಳ್ಳಿ. ತ್ಯಾಗ: ದೀಪ. ಉಸಿರು: ಮೌನದಲೆ ಜೊತೆಗಿರುವ ಗೆಳೆಯ. ಹ್ರದಯ: ಎಚ್ಚರಿಕೆ ಗಂಟೆ. ಕಣ್ಣು: ಸೃಷ್ಟಿಯ ಕನ್ನಡಿ. ಮಾತು: ಬೇಸರ ನೀಗುವ ವಿದ್ಯೆ. ಮೌನ: ಭಾಷೆಗೂ ನಿಲುಕದ ಭಾವ. ಕಣ್ಣೀರು: ಅಸ್ತ್ರ ನೋವು: ಅಸಹಾಯಕತೆ ನಗು: ಔಷಧಿ. ಹಣ: ಅವಶ್ಯಕತೆ. ಗುಣ: ಆಸ್ತಿ. ಕಲೆ: ಜ್ಞಾನ. ಧರ್ಮ: ಬುನಾದಿ. ಕರ್ಮ: ಕಾಣದ ಕೈ ಆಟ. ಕಾಯಕ: ದೇಹ, ಮನಸಿಗೆ ಮಿತ್ರ. ಸಂಸ್ಕೃತಿ: ನೆಲೆ ಸಾಧನೆ: ಜೀವಕ್ಕೆ ಜೀವನಕ್ಕೆ ಬೆಲೆ.
-------------------------------orchid-a-----------------------------------------------------------

A ನಿದು ಪ್ರಪಂಚದಲ್ಲಿ B ಹೇವಿಯರ್ ಸರಿಯಿಲ್ಲ C ರಿವಂತರಿಗೆ ಸೆನ್ಸ್ ಯಿಲ್ಲ D ಗ್ರೀ ಮಾಡಿದರೂ ಪ್ರಯೋಜನವಿಲ್ಲ E ngineering ಮಾಡೋನಾಂದ್ರೆ F uture ಇಲ್ಲ G ವನದಲ್ಲಿ ಜಿಗುಪ್ಸೆಯಾಗಿದೆ H ಆಗಿರುವ ಜನಸಂಖ್ಯೆಯಲ್ಲಿ I ಯೋ ಅನ್ನೋರಿಲ್ಲ J ail ಗೆ ಹೋಗೋಣಾಂದ್ರೆ K D ಗಳ ಸಾಮ್ರಾಜ್ಯ L ಹೋದ್ರು ಬೇಜಾರು M oney ಇಲ್ಲ ಅಂದ್ರೆ N ನ್ನಂತವರಿಗೆ ಜಾಗವಿಲ್ಲ O ಬ್ಬನೆ ಇರೋಣಂದ್ರೆ ಬೇಜಾರ್ P icture ಗೆ ಹೋಗಾಣಾಂದ್ರೆ Q ನಲ್ಲಿ ನಿಲ್ಕಕ್ಕಾಗಲ್ಲ R ಮಿಗೆ ಸೇರೋಣಾಂದ್ರೆ S ಕೇಪ್ ಅಗೋಕಾಗಲ್ಲ T V ನೋಡೋಣಾಂದ್ರೆ U seless ಅಂತಾರೆ V ಚಿತ್ರವಾದ W orld ನಲ್ಲಿ X ಪಿರಿಯೆನ್ಸಯಿಲ್ಲ Y man?ಅನ್ನೊರಿಲ್ಲ Z oo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ ...........? ಅ ಮ್ಮನ ಮಡಿಲಿಂದ ಆ ಎನ್ದು ಅಳುತ್ತಾ ಇ ಲ್ಲಿಗೆ ಈ ಸಬೇಕು ಉ ಪಕಾರಿಯಾಗಿ ಊ ರಿಗೆ ಋ ಣಿಯಾಗಲು ಎ ಷ್ಟೇ ಏಗಿದರೂ ಐ ದಂಕಿ ಸಂಬಳಕ್ಕೆ ಒ ಗ್ಗಟ್ಟಿನಿಂದ ಓ ಟದ ಜೀವನದಲ್ಲಿ ಔ ಡು ಗಚ್ಚಿ ಅಂ ದದ ಬದುಕಿಕಾಗಿ ಅಃ ಹರ್ನಿಶಿ ಕ ಷ್ಟ ಪಟ್ಟು ಖ ಗದಂತೆ ಹಾರಿ , ಮೃಗದಂತೆ ಗ ಟ್ಟಿಯಾಗಿ ಘ ರ್ಜಿಸಲು ಆಗದೆ ಙ ಸ್ವರದಂತೆ ಏಕಾಂಗಿಯಾಗಿ ಚ ಲಿಸಲು ಕಷ್ಟ ಪಡುತ್ತಾ ಛ ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ ಜ ಗತ್ತಿನಲ್ಲಿ ಝ ರಿಯಂತೆ ಞ (ನ್ಯಾ)ಸಾಗುತ್ತಾ (ಚೌಕಟ್ಟು) ಟ ಗರಿನ ಚರ್ಮದಂತೆ ಠ ಕ್ಕತನಕ್ಕೆ ಒಳಗಾಗುತ್ತಾ ಡ ಮರುಗದ ಶಬ್ಧಕ್ಕೆ ಢ ವಡವ ಗುಡುತ್ತಾ ಹ ಣ ಕ್ಕೆ ಣ ಕಾರ ಇಲ್ಲದೇ ಬರಿದೇ ತ ತ್ತರಿಸುತ್ತಾ.. ಥ ರಥರನೆ ನಡುಗುತ್ತಾ.. ದ ನಕ್ಕಿಂತ ಕೀಳಾಗಿ ಧ ನಕ್ಕೆ ಆಳಾಗಿ ಕಿರು ನ ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ ಪ ರಿಸರಕ್ಕೆ ಫ ಲವಾಗದೇ (ಪೂರಕವಾಗದೇ) ಬ ರಿದೇ ಭಂಡ ಮ ನುಷ್ಯನಾಗಿ ಯ ಮನಿಗೆ ತನ್ನನ್ನು ರ ಕ್ಷಿಸು ಎಂದು ಸಾವಿನ ವ ರ ಬಯಸುತ್ತಾ ಕೊನೆಗೆ ಶ ವವಾಗಲು ಸ ಮಯ ಕಾಯುತ್ತಾ ಹ ಗಲಿರು ಳ ಲ್ಲೂ ಕ್ಷ ಣ ಬದುಕಿ ಸಾಯುವ ನಮ್ಮ ಜೀವನ...ಅ ಯಿಂದ ಕ್ಷ ಅಷ್ಟೇ..

-------------------------orchid-a-----------------------------------------------------


ಹಳೆಯ ಕಾಲದ ಹೆಂಚಿನ ಮನೆಯಲ್ಲಿ ಕೊತಕೊತನೆ ಕುದಿದು ಆವಿಯಾಗಿ ಹೋಗುತಿದ್ದ ದುಃಖ ಈಗಿನ ಕಾಲದ ತಾರಸಿ ಮನೆಯಲ್ಲಿ ಕುಕ್ಕರ್‌ನಲ್ಲಿ ಒಳಗೊಳಗೇ ಬೆಂದು ಕೂಗು ಹಾಕುತ್ತಿದೆ...... ಆಗಿನ ತುಂಬು ಮನೆಯಲ್ಲಿ ಹೇಳಿ ಹಗುರಾಗುತಿದ್ದ ದಿಗಿಲು ಈಗಿನ ಪುಟ್ಟ ಗೂಡಿನಲ್ಲಿ ಏಕಾಂಗಿಯಾಗಿ ಅನುಭವಿಸುತ್ತಿದೆ.. ಸೋಗೆ ಮನೆಯ ಸಂದಿಯಲ್ಲಿ ಸೋರಿ ಹೋಗುತಿದ್ದ ಕಣ್ಣೀರು ಸಿಮೆಂಟು ಕಲ್ಲುಗಳ ಮಧ್ಯೆ ಹೆಪ್ಪುಗಟ್ಟುತ್ತಿದೆ.... ಆಗ ಚಿಕ್ಕ ಪುಟ್ಟ ಸಂತಸಕ್ಕೆ ಸಂಭ್ರಮಿಸುತಿದ್ದ ಮನಸ್ಸು ಈಗ ದೊಡ್ಡದೆನ್ನುವ ಸಂಭ್ರಮಕ್ಕೆ ನಗಲು ಕಂದಾಯ ಕೇಳುತ್ತಿದೆ..... ಆಗ ಅಮ್ಮನ ಮಡಿಲಲ್ಲಿ ಅತ್ತು ಮರೆತುಬಿಡುತಿದ್ದ ನೋವು ಈಗ ನಗುವಿನ ಮುಖವಾಡ ಹೊತ್ತು ನಾಟಕವಾಡುತ್ತಿದೆ.... ಅಣ್ಣ ತಮ್ಮ ಅಕ್ಕ ತಂಗಿ ಯರ ಜೊತೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ಮನಸ್ಸು ಹಾಸ್ಯದ ಕಾರ್ಯಕ್ರಮಗಳಿಗೆ ಹೋಗಿ ಮುಖ ಊದಿಸಿಕೊಂಡು ಬರುತ್ತಿದೆ.... ಬಡತನದ ಬೇಗೆಯಲ್ಲೂ ಗಂಜಿ ಕುಡಿದು ಸುಖದಿಂದ ನಿದ್ರಿಸುತಿದ್ದ ಸಂಸಾರ ಇದೀಗ ಮ್ರಷ್ಟಾನ್ನ ಭೋಜನವ ತಳ್ಳಿ ನಿದ್ದೆ ಗುಳಿಗೆ ಬೇಡುತ್ತಿದೆ..... ಬದಲಾವಣೆಗಳನ್ನು ನಮಗೆ ಬಿಟ್ಟು ಕಾಲ ತನ್ನಷ್ಟಕ್ಕೆ ಮುಂದೆ ಸಾಗುತ್ತಿದೆ ಕಾಲ ಬದಲಾಯಿತೋ ನಾವೇ ಬದಲಾದೆವೋ? ಈ ದ್ವಂದ್ವದಲ್ಲಿ ಬದುಕು ಸಾಗುತ್ತಿದೆ ...... ನನ್ನದಲ್ಲದ ನಾ ಮೆಚ್ಚಿದ ಕವನ. ಏನು ಹೇಳಬೇಕೋ ತಿಳಿಯದೇ ಮೂಕ ಪ್ರೇಕ್ಷಕ ನಾನಾದೆ.
--------------------------------orchid-a-------------------------------------------------



🍁ಬಾಳಿಗೊಂದು ಬಂಗಾರದಂಥ ಮಾತು 
# ನನಗೆ 6 ವರ್ಷವಿದ್ದಾಗ ಅರೆ,ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ ! ಎಂದು ಆಗ ಅನಿಸುತ್ತಿತ್ತು.
 # 10 ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ 
# 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು # 16 ನೇ ವಯಸ್ಸಿಗೆ ಬಂದಾಗಂತೂ ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ 
# 19 ನೇ ವಯಸ್ಸಿನಲ್ಲಿ ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು
# 21 ಕ್ಕೆ ಬಂದೆನಾ ಅಪ್ಪ ವಿಪರೀತ ಬಿಗಿಯಾದವನಂತೆತೀರಾ ಒರಟನಂತೆ ಕಂಡ.
 # 22 ನೇ ವಯಸ್ಸಿನಲ್ಲಿ ಅಂದುಕೊಂಡೆಅಪ್ಪನಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆಅವನೇನು ಮಹಾ ? 25 ನೇ ವಯಸ್ಸಿಗೆ, "ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿಅವನಿಗೇನು ಗೊತ್ತು ?" ಅಂದುಕೊಂಡೆ.
 # 30 ರಲ್ಲಿದ್ದಾಗ ಮದುವೆಯಾದೆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು
. # 35 ನೇ ವಯಸ್ಸಿನಲ್ಲಿ ನನ್ನ ಮಗ/ಮಗಳ ರಂಪ ಕಂಡು ತಲೆ ಚಿಟ್ಟು ಹಿಡಿಯಿತು. # 39 ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆಅಪ್ಪ ನೆನಪಾದ
# 42 ನೇ ವಯಸ್ಸಿನಲ್ಲಿ ಅನಿಸಿದ್ದುಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ. # 45  ವಯಸ್ಸಲ್ಲಿ ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ.
 # 50 ರಲ್ಲಿದ್ದಾಗ ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ?
 # 58 ನೇ ವಯಸ್ಸಿನಲ್ಲಿ ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರುಅಪ್ಪನ ನೆನೆದು ಅಳು ಬರುತ್ತಿತ್ತು # ಕಡೆಗೂ ಹಳೆಯದೆಲ್ಲಾ ನೆನಪಾಗಿಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು
, # ಅಪ್ಪಾ U R ಗ್ರೇಟ್ 
ಅಂದಾಗನನಗೆ 60 ವರ್ಷ ತುಂಬಿತ್ತು
ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು ಖ್ಯಾತ ಲೇಖಕರಾದಶ್ರೀ ಮಣಿಕಾಂತ ಅವರ "ಅಪ್ಪ ಅಂದ್ರೆ ಆಕಾಶಪುಸ್ತಕದಿಂದ ಪಡೆದದ್ದು.



ನೇತಾಜಿ ಏನಾದರು?ಉದಯವಾಣಿ, Sep 27, 2015, 3:45 AM ISTಸುಭಾಷ್‌ ಚಂದ್ರ ಬೋಸ್‌ ಅವರ ರಾಣಿ ಝಾನ್ಸಿ  ರೆಜಿಮೆಂಟಿನಲ್ಲಿ ಸಕ್ರಿಯರಾಗಿದ್ದ ಲೆ| ಮಾನ್ವತಿ ಆರ್ಯ ಪೇಟ್ರಿಯಟ್‌: ದಿ ಯುನೀಕ್‌ ಇಂಡಿಯನ್‌ ಲೀಡರ್‌ ನೇತಾಜಿ ಸುಭಾಷ್‌ಚಂದ್ರಬೋಸ್‌  ಕೃತಿಯಲ್ಲಿ ನೇತಾಜಿಯವರ ಜೀವನಕಥನದ ಬಗ್ಗೆ ವಿಸ್ತೃತವಾಗಿ ನಿರೂಪಿಸಿದ್ದಾರೆ. ಡಿಡ್‌ ಹಿ ಡೈ ಇನ್‌ 1945  ಅಧ್ಯಾಯದಲ್ಲಿ ನೇತಾಜಿಯವರ ನಿಧನದ ಸುತ್ತ ಇರುವ ಊಹಾಪೋಹಗಳನ್ನು ಅನಾವರಣಗೊಳಿಸುವ ಪ್ರಯತ್ನವಿದೆ. ಅದರ ಆಧಾರದಲ್ಲಿ ಈ ಬರಹವನ್ನು ನಿರೂಪಿಸಲಾಗಿದೆ. ...ವಿಮಾನ ದುರಂತದಲ್ಲಿ ನೇತಾಜಿ ಸತ್ತು ಹೋದರು ಎಂಬ ವಾದವನ್ನು ಅನೇಕ ತಜ್ಞ ಸಂಶೋಧಕರು ತಮ್ಮ ಬಂಗಾಲಿ ಉದ್ಗ†ಂಥಗಳಲ್ಲಿ ಸಾಧಾರಣ ಅಲ್ಲಗಳೆದಿದ್ದಾರೆ. ಡಾ| ಸುಶಾಂತ್‌ ಕುಮಾರ್‌ ಮಿತ್ರಾ ಬರೆದ ನೇತಾಜಿ: ಅಜ್ಞಾತ್‌ಅಧ್ಯಾಯ್‌, ದೇವೇಶ್‌ಚಂದ್ರ ರಾಯ್‌ ರಚಿಸಿದ ಸುಭಾಷ್‌ ದರ್ಪಣ್‌ ವಿಶ್ವರೂಪ್‌ ಮತ್ತು ಪ್ರೊ| ಸಮರ್‌ ಗುಹಾ ಅವರ ಇಂಗ್ಲಿಷ್‌ ಪುಸ್ತಕ ನೇತಾಜಿ ಡೆಡ್‌ ಓರ್‌ ಅಲೈವ್‌ ಅಂಥ ಗ್ರಂಥಗಳಲ್ಲಿ ಮುಖ್ಯವಾದವು. ಕಾಲಕ್ರಮೇಣ ನೇತಾಜಿ ಬದುಕಿದ್ದಾರೆ ಎಂಬ ಅವರ ವಾದ ಹುರುಳುಕಳೆದುಕೊಂಡಿದೆಯಾದರೂ, ನೇತಾಜಿ ವಿಮಾನ ದುರಂತದಲ್ಲಿ ಮಡಿಯಲಿಲ್ಲ; ಅವರ ಸುರಕ್ಷಿತ ಪಲಾಯನಕ್ಕಾಗಿ ಅಂಥ ದುರಂತದ ಕಥೆಯೊಂದನ್ನು ಹೆಣೆಯಲಾಯಿತು ಎಂಬ ವಾದ ರಾಜಕೀಯ ಕಾರಣಗಳಿಗಾಗಿ ಮತ್ತೆ ಮತ್ತೆ ವಿವಿಧ ಸ್ತರಗಳಲ್ಲಿ ವಿವಾದವನ್ನು ಉಂಟು ಮಾಡುತ್ತಲೇಇದೆ. ನೇತಾಜಿ ಅವರ ವಿಮಾನ ದುರಂತ ಮೃತ್ಯುವಿನ ಸತ್ಯಾಸತ್ಯತೆಯನ್ನು ಶೋಧಿಸಲು ನೇಮಿಸಿದ ಮೊದಲ ಆಯೋಗವನ್ನು ಮುಖರ್ಜಿ ಮುನ್ನಡೆಸಿದ್ದರು. "ಸುಭಾಷ್‌ಚಂದ್ರ ಬೋಸ್‌ ಸತ್ತಿದ್ದಾರೆ, ಆದರೆ, ಈಗಾಗಲೇ ಒಪ್ಪಿಕೊಂಡಿರುವಂತೆ ವಿಮಾನ ದುರಂತದಲ್ಲಿ ಅಲ್ಲ. ಜಪಾನಿನ ದೇವಾಲಯದಲ್ಲಿರುವ ಚಿತಾಭಸ್ಮಅವರದಲ್ಲ' ಎಂಬುದು ಮುಖರ್ಜಿ ಆಯೋಗದ ವರದಿಯ ಸಾರಾಂಶ. ಮುಖರ್ಜಿ ಆಯೋಗದ ವರದಿಯನ್ನು ಯುಪಿಎ ಸರಕಾರ ಯಾವ ಖಚಿತ ಕಾರಣವನ್ನೂ ನೀಡದೆ, ಸಂಸತ್ತಿನಲ್ಲಿ ಚರ್ಚಿಸದೆ ತಿರಸ್ಕರಿಸಿದ್ದು ನೇತಾಜಿ ಬಗ್ಗೆ ಇರುವ ರಾಜಕೀಯ ಪ್ರೇರಿತ ಪಕ್ಷಪಾತ ಧೋರಣೆಗೆ ಸ್ಪಷ್ಟ ಸಾಕ್ಷಿ. 1945ರ ಆ. 15ರಂದು ಜಪಾನ್‌ ಮಿತ್ರಪಡೆಗಳಿಗೆ ಶರಣಾದ ಬಳಿಕ ನೇತಾಜಿ ಆಗ್ನೇಯ  ಏಶ್ಯಾದಿಂದ ರಶ್ಯಕ್ಕೆ ಪಾರಾದರು. 1944ರಲ್ಲಿ ಬರ್ಮಾದ ತನ್ನ ಮೇಮ್ಯೋ ಕೇಂದ್ರ ಕಚೇರಿಯಿಂದ ರಷ್ಯನ್‌ ನಿಯೋಗದ ಮೂಲಕ ರಶ್ಯದ ಅಧ್ಯಕ್ಷ ಜೋಸೆಫ್ ಸ್ಟಾಲಿನ್‌ಗೆ ಕಳುಹಿಸಿದ್ದ ನಿರೂಪಕ್ಕೆ ಅನುಗುಣವಾಗಿ ರಶ್ಯದ ಸಹಕಾರ ಮತ್ತು ಸಹಾಯದಿಂದ ತನ್ನ ಹೋರಾಟವನ್ನು ಮುಂದುವರಿಸುವುದೇ ನೇತಾಜಿಯವರ ಪಲಾಯನದ ಉದ್ದೇಶವಾಗಿತ್ತು ಎಂಬ ವಾದ ನಿಜ ಎಂಬುದೇ ನನ್ನ ದೃಢ ನಂಬಿಕೆಯಾಗಿದೆ. ಈ ಮಹಾ ಪಲಾಯನದಲ್ಲಿ ನೇತಾಜಿಯವರ ಅತ್ಯಾಪ್ತ ಐಎನ್‌ಎ ಅಧಿಕಾರಿ ಕ| ಹಬೀಬುರ್‌ ರಹಮಾನ್‌ ದ್ವಿಪಾತ್ರವನ್ನು ನಿಭಾಯಿಸಿದ್ದರು. ಒಂದೆಡೆನೇತಾಜಿ ಅವರಿಗೆ ವಿಶ್ವಾಸದ್ರೋಹ ಎಸಗಿದಂತೆ ಕ| ರಹಮಾನ್‌ ನಟಿಸಿದ್ದರು, ಮಿತ್ರಪಡೆಗಳನ್ನು ಸೇರಿ ಜಪಾನೀ ಸೈನ್ಯದ ಸಹಾಯದಿಂದ ಉದ್ದೇಶಪೂರ್ವಕವಾಗಿ ನಡೆಸಿದ ವಿಮಾನ ದುರಂತದಲ್ಲಿ ನೇತಾಜಿಯವರನ್ನು ರಹಸ್ಯವಾಗಿ "ಮುಗಿಸುವ' ಕಾರ್ಯಕ್ಕೆ ಸಹಾಯ ಮಾಡುವ ಅಭಿನಯ ಮಾಡಿದ್ದರು. ಅದೇವೇಳೆ ಅವರು ತಥಾಕಥಿತ ವಿಮಾನ ದುರಂತದಲ್ಲಿ ನೇತಾಜಿ ಮಡಿದರೆಂಬುದಕ್ಕೆ ಸಾಕ್ಷಿ ಯಾಗಿ ಪ್ರದರ್ಶಿಸಲು ತನ್ನದೇ ದೇಹ ಮತ್ತು ಕೈಗಳನ್ನು ಸುಡಿಸಿ ಕೊಳ್ಳುವ ಮೂಲಕ ನೇತಾಜಿಯವರ ಪಲಾಯನಕ್ಕೆ ಸಹಕರಿಸಿ ಅವರಿಗೆ ಸಂಪೂರ್ಣ ನಿಷ್ಠರಾಗಿ ಉಳಿದರು. ಜಪಾನೀಯರೂ ಸುಭಾಷ್‌ ಅವರಿಗೆ ಕೊನೆಯವರೆಗೂ ನಿಷ್ಠರಾಗಿಯೇ ಇದ್ದರು. ತಮ್ಮನ್ನು ಪರಾಜಿತಗೊಳಿಸಿದ ಮಿತ್ರಪಡೆಗಳು ಹೇಳಿದಂತೆ ಮಾಡುವುದು ಆಗ ಅವರಿಗೆ ಅನಿವಾರ್ಯವಾಗಿತ್ತು ಅಷ್ಟೇ. ನೇತಾಜಿಯವರನ್ನು ರಹಸ್ಯವಾಗಿ ಮುಗಿಸುವ ವಿಮಾನದುರಂತ ಸಂಚನ್ನು ಯಶಸ್ವಿಯಾಗಿ ನೆರವೇರಿಸು ವುದರ ನಡುವೆಯೂ ಸುಭಾಷರನ್ನು ಯಶಸ್ವಿಯಾಗಿ ರಶ್ಯದ ನೆಲಕ್ಕೆ ತಲುಪಿಸಿ ಆ ಮಹಾಪಲಾಯನವನ್ನು ಸಾಧ್ಯಗೊಳಿಸಿದ್ದು, ನೇತಾಜಿ "1945ರ ಆಗಸ್ಟ್‌ 18ರಂದು ನಡೆದ ವಿಮಾನ ದುರಂತದಲ್ಲಿ ಸುಟ್ಟ ಗಾಯಗಳಿಂದಾಗಿ ಮರಣಿಸಿದ್ದಾರೆ' ಎಂಬ ಸುದ್ದಿಯನ್ನು ರೇಡಿಯೋ ಮೂಲಕ ಬಿತ್ತರಿಸುವುದಕ್ಕಾಗಿ ಆಗಸ್ಟ್‌ 23ರಂದು ಟೋಕಿಯೋ ನ್ಯೂಸ್‌ ಏಜೆನ್ಸಿಗೆ ನೀಡಿದ್ದು ಜಪಾನೀ ಸೇನಾಧಿಕಾರಿಗಳೇ; ಆ ಹೊತ್ತಿಗಾಗಲೇ ನೇತಾಜಿ ರಷ್ಯಾದ ನೆಲವನ್ನು ಸುರಕ್ಷಿತವಾಗಿ ತಲುಪಿಯಾಗಿತ್ತು!ನೇತಾಜಿ ಅವರ ವಿಮಾನ ದುರಂತ ಮರಣದ ವಾರ್ತೆಯ ಹಿಂದುಮುಂದನ್ನು ಆಳವಾಗಿ ಚಿಂತಿಸಿದ ಬಳಿಕ ಮನಸ್ಸಿಗೆ ಹೊಳೆಯುವುದು ಇಷ್ಟು. ಆದರೆ,  ಈ ಊಹೆಯನ್ನು ಗಟ್ಟಿಯಾಗಿ ಹೇಳಲು ಯಾವ ಸಾಕ್ಷ್ಯವೂ ಇರಲಿಲ್ಲ ಎಂಬುದು ಒಂದು ಕಾರಣವಾದರೆ; ಆ ಹೊತ್ತಿನಲ್ಲಿ ನೇತಾಜಿಯವರ ಪ್ರತಿ ನಡೆಯೂ ಅವರೇ ಕಾಯ್ದುಕೊಂಡ ಅತ್ಯುನ್ನತ ರಹಸ್ಯವಾಗಿತ್ತು. ಲೆ| ಮಾನ್ವತಿ ಆರ್ಯ ಹೇಳುವಂತೆ ಅವರು ಸಹಿತ ನೇತಾಜಿಯವರ  ಯಾವೊಬ್ಬ ನಿಷ್ಠಾವಂತ ಅನುಯಾಯಿಯೂ ತಮಗೆ ಗೊತ್ತಿದ್ದ ನಿಜವನ್ನು ಬಾಯ್ದೆರೆದು ಹೇಳುವಹಾಗಿರಲಿಲ್ಲ ಎಂಬುದು ಇನ್ನೊಂದು ಕಾರಣ. ವಿಮಾನ ದುರಂತದಲ್ಲಿ ನೇತಾಜಿ ಗಂಭೀರ ಸುಟ್ಟಗಾಯಗಳಿಗೆ ಈಡಾದ ಪರಿಣಾಮ ಥಾçಹೊಕು (ಈಗಿನ ತೈಪೇ) ವಿನ ಜಪಾನೀ ಮಿಲಿಟರಿ ಆಸ್ಪತ್ರೆಯಲ್ಲಿ 1945ರ ಆಗಸ್ಟ್‌ 18ರ ರಾತ್ರಿ 12 ಗಂಟೆಗೆ ಸತ್ತರು ಎಂಬುದು ಎಲ್ಲರೂ ಒಪ್ಪಿಕೊಂಡಿರುವ ಆಯಾಮ. ನೇತಾಜಿ ಮರಣಿಸಿದ ಸಮಯದ ಬಗ್ಗೆ ಗೊಂದಲಗಳಿವೆ. ಅವರ ದೇಹಾಂತವಾದ ಸುದ್ದಿಯನ್ನು ಜಪಾನ್‌ ಸರಕಾರ ಪ್ರಕಟಿಸಿದ್ದಲ್ಲ, ಬದಲಾಗಿ ಟೋಕಿಯೋ ರೇಡಿಯೋ ಈ ವಾರ್ತೆಯನ್ನು ಬಿತ್ತರಿಸಿತು; ಅದೂ ತಥಾಕಥಿತ ದುರ್ಘ‌ಟನೆ ನಡೆದು ಐದು ದಿನಗಳ ಬಳಿಕ, ಅವರ ದೇಹವನ್ನು ಥಾçಹೊಕುವಿನಿಂದ ಟೋಕಿಯೋಗೆ ತರಲಾಗಿತ್ತು ಎಂಬುದಾಗಿ. ಆಗ ಬಿತ್ತರಗೊಂಡ ಸುದ್ದಿಗಳಲ್ಲಿ ನೇತಾಜಿ ಸತ್ತಸಮಯ, ಅವರ ಪಾರ್ಥಿವವನ್ನು ದಹಿಸಿದ ಸ್ಥಳಗಳ ಬಗ್ಗೆ ಇದ್ದ ಬೇಧಗಳು ಮತ್ತು ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳಲ್ಲಿ ಇರುವ ವ್ಯತ್ಯಾಸಗಳು ನೇತಾಜಿಯವರ ಮೃತ್ಯುವಿನ ಬಗ್ಗೆ ಸಂಶಯಗಳಿಗೆ ಪುಟಗೊಡುತ್ತವೆ.ಇದಲ್ಲದೆ, ಗಾಂಧೀಜಿ, ಮಾಳವೀಯ, ಅಬುಲ್‌ ಕಲಾಮ್‌ ಆಜಾದ್‌, ನೆಹರೂ ಮುಂತಾದ ಯಾವೊಬ್ಬಭಾರತೀಯ ನಾಯಕನೂ, ಸ್ವತಃ ನೇತಾಜಿ ಕುಟುಂಬದವರೂ ಅವರ ಅನುಯಾಯಿಗಳೂ ಈ ಸುದ್ದಿಯನ್ನು ನಂಬಿರಲಿಲ್ಲ. ಈ ಸುದ್ದಿಯನ್ನು ಆಧರಿಸಿ ಅಖೀಲ ಭಾರತೀಯ ಕಾಂಗ್ರೆಸ್‌ ಸಮಿತಿ ನೇತಾಜಿಯವರಿಗೆ ಶ್ರದ್ಧಾಂಜಲಿ ನಿರ್ಣಯವನ್ನು ಅಂಗೀಕರಿಸಲಿಲ್ಲ. ಗಾಂಧೀಜಿಯವರಂತೂ ಕೊಲ್ಕತಾದಲ್ಲಿದ್ದ ನೇತಾಜಿ ಕುಟುಂಬಕ್ಕೆ ಪತ್ರ ಬರೆದು, ಅವರಿಗೆ ಶ್ರಾದ್ಧ ನೆರವೇರಿಸದಂತೆ ಸೂಚಿಸಿದ್ದರು. ""ನೇತಾಜಿ ಎಲ್ಲೋ ಒಂದೆಡೆ ಅಜ್ಞಾತರಾಗಿ ಬದುಕಿದ್ದಾರೆ''ಎಂಬುದಾಗಿ ಗಾಂಧೀಜಿ 1946ರ ಜನವರಿ 2ರಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಕ| ಹಬೀಬುರ್‌ ರಹಮಾನ್‌ ಅವರನ್ನು ಭೇಟಿಯಾಗಿ, ಅವರ ಮೈಯ ಸುಟ್ಟ ಗಾಯಗಳನ್ನು ಕಣ್ಣಾರೆ ಕಂಡ ಬಳಿಕವೂ ಅವರ ನಿಲುವು ಬದಲಾಗಲಿಲ್ಲ. ಟೋಕಿಯೋದಿಂದ ಪ್ರಸಾರವಾದ ವಾರ್ತೆಯನ್ನು ಭಾರತದ ವೈಸರಾಯ್‌ ಕೂಡ ನಂಬಿರಲಿಲ್ಲ ಎಂಬುದುಆ ದಿನಗಳ ಅವರ ದಿನಚರಿಯ ಪುಟಗಳಿಂದ ದೃಢವಾಗುತ್ತದೆ. 1945ರ ನೇತಾಜಿ ಮೃತ್ಯು ವಾರ್ತೆಯನ್ನು ಜಪಾನ್‌ ಸರಕಾರ ಅಧಿಕೃತವಾಗಿ ದೃಢಪಡಿಸಲಿಲ್ಲ. ವಿಮಾನ ದುರಂತ ನಡೆದ ಥಾçಹೊಕುವಿನಲ್ಲಿ ಪ್ರತ್ಯೇಕವಾಗಿ ಸ್ಥಳ ತನಿಖೆ ನಡೆಸಿದ ಅಮೆರಿಕದ ಸೇನಾಧಿಕಾರಿ ಜ| ಮೆಕಾರ್ಥರ್‌, ಮಿತ್ರಪಡೆಯ ಆಗ್ನೇಯ ಏಶ್ಯಾ ಮುಖ್ಯಸ್ಥ ಅ| ಮೌಂಟ್‌ಬ್ಯಾಟನ್‌, ಬ್ರಿಟಿಶ್‌ ಗ್ಲೋಬಲ್‌ ಕೌಂಟರ್‌ ಇಂಟೆಲಿಜೆನ್ಸ್‌ ಕಂಬೈನ್‌x ಸರ್ವೀಸಸ್‌ ಮತ್ತು ಥಾçಹೊಕುವಿನ ಮೇಯರ್‌ ಅವರು ತಮ್ಮ ವರದಿಗಳನ್ನು 1945ರಲ್ಲೇ ಸಲ್ಲಿಸಿದ್ದರು. ಆದರೆ ಈ ವರದಿಗಳನ್ನು ಎಂದೂ ಯಾರೂ ಬಹಿರಂಗಪಡಿಸಿದ್ದಿಲ್ಲ. ಸ್ವತಂತ್ರ ಭಾರತದ ಎಲ್ಲ ಸರಕಾರಗಳೂ ಈ ವರದಿಗಳ ಬಗ್ಗೆ ಔದಾಸೀನ್ಯವನ್ನೇ ಪ್ರದರ್ಶಿಸಿದವು. ತಮ್ಮ ಪ್ರೀತಿಪಾತ್ರ ನೇತಾಜಿಯವರ ನಾಪತ್ತೆ, ಅವರ ಮೃತ್ಯು ಅಥವಾ ಅವರು ಬದುಕಿದ್ದರೆ ಎಲ್ಲಿದ್ದಾರೆ ಎಂಬ ಬಗ್ಗೆ ದೇಶಭಕ್ತ ಭಾರತೀಯರು ತಿಳಿಯಲು ಬಯಸಿದ್ದರೂ ಈ ಸೂಕ್ಷ್ಮ ರಾಷ್ಟ್ರೀಯ ವಿಚಾರವನ್ನು ಲಾರ್ಡ್‌ ಮೌಂಟ್‌ಬ್ಯಾಟನ್‌ ಪ್ರಭಾವದ ನೆರಳಿನಡಿ ಇದ್ದ ನೆಹರೂ ಸರಕಾರ ರಹಸ್ಯವಾಗಿಯೇ ಇರಿಸಿಕೊಂಡಿತು. ಆ ಬಳಿಕ ಈ ರಹಸ್ಯ ಕಾಪಾಡುವಿಕೆ ಭಾರತೀಯ ಸರಕಾರದ ಒಂದು ಖಾಯಂ ನೀತಿಯಾಗಿಯೇ ಮುಂದುವರಿಯಿತು. ನೇತಾಜಿ ವಿಮಾನ ದುರಂತ ಮೃತ್ಯು ನಡೆದು ಹತ್ತು ವರ್ಷಗಳಬಳಿಕ 1956ರ ಆದಿಯಲ್ಲಿ ಕೋಲ್ಕತಾ ನಾಗರಿಕ ವೇದಿಕೆ ಹಿರಿಯ ಜ್ಯೂರಿಸ್ಟ್‌ ಮತ್ತು ಟೋಕಿಯೋ ಯುದ್ಧಾಪರಾಧಿಗಳ ವಿಚಾರಣೆಯಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿ ಡಾ| ರಾಧಾ ವಿನೋದ್‌ ಪಾಲ್‌ ನೇತೃತ್ವದಲ್ಲಿ ಸರಕಾರೇತರತನಿಖಾ ಆಯೋಗವನ್ನು ರಚಿಸಿತ್ತು. ಇದಕ್ಕೆ ಪ್ರತಿಯಾಗಿ ನೆಹರೂ ರಚಿಸಿದ ಶಾ ನವಾಜ್‌ ಖಾನ್‌ ನೇತೃತ್ವದ ಸರಕಾರಿ ಆಯೋಗ ಯಾವ ನ್ಯಾಯನಿರ್ಣಯ ಅಧಿಕಾರವನ್ನೂ ಹೊಂದಿರಲಿಲ್ಲ.ಅಲ್ಲದೆ, ಥಾçಹೊಕುಗೆ ಭೇಟಿ ನೀಡಿ ತನಿಖೆ ನಡೆಸುವುದಕ್ಕೂ ಪಂಡಿತ್‌ ನೆಹರೂ ಅನುಮತಿ ನೀಡಿರಲಿಲ್ಲ. ಅದರ ಫ‌ಲವಾಗಿ ನೆಹರೂ ಬಯಸಿದಂಥದ್ದೇ ವರದಿಯೊಂದು ಸರಕಾರಕ್ಕೆ ಸಲ್ಲಿಕೆಯಾಯಿತು ಅಷ್ಟೇ. ಇದೊಂದೇ ಅಲ್ಲ; ಶಾ ನವಾಜ್‌ ಸಮಿತಿಯ ತನಿಖೆ ಇನ್ನೂ ನಡೆಯುತ್ತಿರುವಾಗಲೇ ನೆಹರೂ ಸಂಸತ್ತಿನಲ್ಲಿ "ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಮರಣದ ವಿಚಾರ, ನನಗನಿಸುವಂತೆ ಸಂಶಯಾತೀತವಾಗಿ ಶ್ರುತಪಟ್ಟಿದೆ' ಎಂಬುದಾಗಿ ಘೋಷಿಸಿಯೂ ಬಿಟ್ಟರು. ನೆಹರೂ ತಮ್ಮ ಜೀವಿತದುದ್ದಕ್ಕೂ ನಿಷ್ಠೆಯಿಂದ ಮಾಡಿದ ಒಂದುಕೆಲಸವೆಂದರೆ, ನೇತಾಜಿಯವರ ಬಗ್ಗೆ ತಿಳಿಯಲು ದೇಶವಾಸಿಗಳಿಗೆ ಇದ್ದ ಕಾತರವನ್ನು ಕಠಿನವಾಗಿದಮನಿಸಿದ್ದು. ನೆಹರೂ ಅವರ ಬಳಿಕ ಅವರ ಪುತ್ರಿ ಇಂದಿರಾ ಗಾಂಧಿ ಈ ನೇತಾಜಿ ನಿಗ್ರಹ ನಿಷ್ಠೆಯನ್ನು ಮುಂದುವರಿಸಿದರು. ಸಂಸತ್ತಿನಲ್ಲಿ ಬಹಸಂಖ್ಯಾಕ ಸಂಸದರು ಮಂಡಿಸಿದ ಗೊತ್ತುವಳಿಗೆ ಮಣಿದು ಆಕೆ ನೇಮಿಸಿದ ಏಕಸದಸ್ಯ ಜಿ. ಡಿ. ಖೋಸ್ಲಾ ಆಯೋಗದ ವರದಿ ಎಲ್ಲನ್ಯಾಯಾಂಗ ನಿಯಮಾವಳಿ, ಔಪಚಾರಿಕತೆ, ನೈತಿಕತೆಗಳನ್ನು ಗಾಳಿಗೆ ತೂರಿತ್ತು, ಅದಕ್ಕಾಗಿ ಖೋಸ್ಲಾ ಕೊಲ್ಕತಾ ನ್ಯಾಯಾಲಯದ ಮುಂದೆ ಕ್ಷಮೆ ಯಾಚಿಸಬೇಕಾಗಿ ಬಂದದ್ದು ಈಗ ಇತಿಹಾಸ. ನೆಹರೂ ತಮ್ಮ ಜೀವಿತಾವಧಿಯಲ್ಲಿ ಬಯಸಿದ್ದಂತಹ ವರದಿಯನ್ನು ಖೋಸ್ಲಾ ಆಯೋಗ ನೀಡಿತ್ತು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಹುತೇಕ ವಿಪಕ್ಷ ಸಂಸದರು ಜೈಲಿನಲ್ಲಿದ್ದಾಗ ಇಂದಿರಾ ಗಾಂಧಿ ಕಾಲದಲ್ಲಿ ಈ ವರದಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿತು!ಮುಂದೆ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ನೇತಾಜಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಮರುಜೀವ ತಂದರು. ಆದರೆ, ಅವರ ಸರಕಾರವೇ ಬಲು ಬೇಗನೆ ಬಿದ್ದುಹೋಯಿತು. 1991ರಲ್ಲಿ ಮತ್ತೆಈ ವಿಚಾರಕ್ಕೆ ಪುನರ್ಜನ್ಮ ನೀಡಿದವರು ಆಗ ರಾಷ್ಟ್ರಪತಿಯಾಗಿದ್ದ ಆರ್‌. ವೆಂಕಟ್ರಾಮನ್‌, ಪ್ರಧಾನಿ ವಿ. ಪಿ. ಸಿಂಗ್‌ಗೆ ಅವರು ಪತ್ರ ಬರೆದು ನೇತಾಜಿ ವಿಚಾರವನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದರು. ಆ ಸರಕಾರವೂ ಅಲ್ಪಕಾಲದ್ದಾಗಿತ್ತು. ಚಂದ್ರಶೇಖರ್‌ ಮುಂದೆ ಪ್ರಧಾನಿ ಗಾದಿ ಏರಿದಾಗ ರಾಷ್ಟ್ರಪತಿ ವೆಂಕಟ್ರಾಮನ್‌ ಅವರಿಗೂ ಪತ್ರ ಬರೆದರು. ಚಂದ್ರಶೇಖರ್‌ ಸರಕಾರವೂ ಬೇಗನೆ ಬಿದ್ದು ಹೋಯಿತು. ವೆಂಕಟ್ರಾಮನ್‌, ಪಿ. ವಿ. ನರಸಿಂಹ ರಾಯರನ್ನೂ ನೇತಾಜಿ ಕಣ್ಮರೆ ಪ್ರಕರಣದ ಸತ್ಯಶೋಧ ನಡೆಸುವಂತೆ ಎರಡು ಬಾರಿ ಕೇಳಿಕೊಂಡಿದ್ದರು. ಆದರೆ, ನರಸಿಂಹ ರಾಯರು ಆಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ,"ಮರಣೋತ್ತರ'ವಾಗಿ ನೇತಾಜಿ ಅವರಿಗೆ ಭಾರತರತ್ನಪ್ರಶಸ್ತಿ ನೀಡಲು ನಿರ್ಧರಿಸಿ ಜನರ ಕಾತರವನ್ನು ಬೇರೊಂದು ಬಗೆಯಲ್ಲಿ ತಣಿಸಲು ಪ್ರಯತ್ನಿಸಿದರು. ನೇತಾಜಿಯವರ ಸಾವು  ನಿಗೂಢವಾಗಿಯೇ ಉಳಿದಿರುವಾಗ ಮತ್ತು ಆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಇನ್ನೂ ನಡೆಯುತ್ತಿರುವಾಗ "ಮರಣೋತ್ತರ' ಪ್ರಶಸ್ತಿಯನ್ನು ಸ್ವೀಕರಿಸಲು ನೇತಾಜಿ ಕುಟುಂಬಿಕರು ನಿರಾಕರಿಸಿದ್ದನ್ನು ತಪ್ಪೆನ್ನಲಾಗದು. ನೇತಾಜಿ ವಿಮಾನ ದುರಂತ ಮರಣದ ತನಿಖೆ ನಡೆ‌ಸಿದ ಕೊನೆಯ ಆಯೋಗದ ಮುಖ್ಯಸ್ಥ ನ್ಯಾ| ಮುಖರ್ಜಿ ಅವರು 2005ರಲ್ಲಿ ಥಾçಹೊಕು ಚಿತಾಗಾರದ ಹಳೆಯ ನೋಂದಾವಣೆ ಪುಸ್ತಕದ ಪ್ರತಿಯನ್ನು ತರಿಸಿದ್ದರು. ಅದರಲ್ಲಿ ಸುಭಾಷ್‌ಚಂದ್ರ ಬೋಸ್‌/ ಚಂದ್ರ ಬೋಸ್‌/ ನೇತಾಜಿ ಎಂಬ ವ್ಯಕ್ತಿಯ ಹೆಸರೇ ಇರಲಿಲ್ಲ. ನೇತಾಜಿ ಮರಣಿಸಿದ್ದರು ಎನ್ನಲಾದ ವಿಮಾನ ದುರಂತದಲ್ಲಿ ಮಡಿದ ಅವರ ಸಹ ಪ್ರಯಾಣಿಕರ ಹೆಸರುಗಳೂ ಅದರಲ್ಲಿರಲಿಲ್ಲ! ನೇತಾಜಿ ದೇಹವನ್ನು ಥಾçಹೊಕುವಿನಿಂದ ಟೋಕಿಯೋಗೆ ಕಳುಹಿಸಲಾಗಿದ್ದರೂ ಅವರ ಸಹ ಪ್ರಯಾಣಿಕರ ಶವಗಳನ್ನಾದರೂ ಅಲ್ಲಿಯೇ ದಹಿಸಿರಬೇಕಲ್ಲವೇ?!ಆ ವಿಮಾನ ದುರಂತ ಒಂದು ಕಟ್ಟುಕಥೆ ಎಂಬುದಕ್ಕೆಇದು ಬಲವಾದ ಸಾಕ್ಷ್ಯ. ನೇತಾಜಿ ತಥಾಕಥಿಕ ವಿಮಾನ ದುರಂತದಲ್ಲಿ ಮರಣಿಸಲಿಲ್ಲ; ಜಪಾನಿನ ರೆಂಕೋಜಿ ದೇವಾಲಯದಲ್ಲಿ ಇರುವ ಚಿತಾಭಸ್ಮ ಅವರದಲ್ಲ ಎಂಬುದನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಶ್ರುತಪಡಿಸಲು ಸಾಧ್ಯವಾಗಿಲ್ಲವಾದರೂ ಅದು ನೇತಾಜಿ ಅವರದಲ್ಲ ಎಂಬುದೇ ಸರಿಯಾದ ತರ್ಕ ಮತ್ತು ವಿವಿಧ ತನಿಖೆಗಳ ಸಾರದ ಆಧಾರದಲ್ಲಿ ನಿರ್ಣಯಿಸಬಹುದಾದ ನಿಜ.  ನೇತಾಜಿ ಅವರಿಗೆ ರಾಸ್‌ಬಿಹಾರಿ ಬೋಸ್‌ ಅವರ ಮೂಲಕ ಪರಿಚಯವಾದವರು ಇ. ಭಾಸ್ಕರನ್‌. ನೇತಾಜಿಅವರ ಅತ್ಯಾಪ್ತರಾಗಿ, ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅದೃಷ್ಟಶಾಲಿ ಈ ಭಾಸ್ಕರನ್‌. 1945ರ ಆಗಸ್ಟ್‌ 17ರಂದು ತನ್ನ ಸಂಗಡಿಗರ ಜತೆಗೆ ಬ್ಯಾಂಕಾಕಿನಿಂದ ಸಣ್ಣ ವಿಮಾನದಲ್ಲಿ ಹಾರಿದ ನೇತಾಜಿ ಅವರನ್ನು ಬೀಳ್ಕೊಂಡವರು ಈತ. ಅದು ನೇತಾಜಿಯ ಕೊನೆಯ ಯಾನವಾಗಿತ್ತು. ಚೆನ್ನೈಯ ಸೌತ್‌ ಮದ್ರಾಸ್‌ ಕಲ್ಚರಲ್‌ ಅಸೋಸಿಯೇಶನ್‌ ನೇತಾಜಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ಸ್ಮರಣಸಂಚಿಕೆಯಲ್ಲಿ ಮೇ| ಇ. ಭಾಸ್ಕರನ್‌ ಬರೆಯುತ್ತಾರೆ...""17-8-1945ರ ಬೆಳಗ್ಗೆ ನೇತಾಜಿ ಮತ್ತು ಅವರ ಏಳು ಮಂದಿ ಸಂಗಡಿಗರು ಬ್ಯಾಂಕಾಕಿನಿಂದ ಸೈಗಾನ್‌ಗೆ ಹೊರಟರು. ತನ್ನ ಸಹಪ್ರಯಾಣಿಕರು ವಿಮಾನ ಏರಿದ ಬಳಿಕ ನೇತಾಜಿ ಒಬ್ಬರೇ ನನ್ನ ಬಳಿಗೆ ಬಂದರು. ನಮ್ಮಿಬ್ಬರ ಬಾಯಿ ಕಟ್ಟಿತ್ತು. ಅವರು ನನ್ನನ್ನು ತಬ್ಬಿಕೊಂಡರು, ಬಳಿಕ ನಿಧಾನವಾಗಿ ವಿಮಾನದತ್ತ ನಡೆದರು. ನಾನು ನೇತಾಜಿಯವರನ್ನುನೋಡಿದ್ದು ಅದೇ ಕಡೆಯ ಬಾರಿ. ಅವರು ರಶ್ಯಕ್ಕೆ ಹೋಗುವುದು ಪೂರ್ವಯೋಜಿತವಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ರಶ್ಯ ಮತ್ತು ಜಪಾನ್‌ ಎದುರಾಳಿಗಳಾಗಿದ್ದವು. ಹೀಗಾಗಿ ಮಂಚೂರಿಯಾದ ಯಾವುದೋ ಒಂದು ಕಡೆ ಜಪಾನೀ ವಿಮಾನ ಸುರಕ್ಷಿತವಾಗಿ ಇಳಿಯಬಲ್ಲಂತಹ ಸ್ಥಳದಲ್ಲಿ ನೇತಾಜಿ ಅವರನ್ನು ಇಳಿಸುವುದು ಮತ್ತು ಮುಂದಿನದನ್ನು ಅವರ ಜವಾಬ್ದಾರಿಗೆ ಬಿಡುವುದುಎಂದು ತೀರ್ಮಾನವಾಗಿತ್ತು. ನೇತಾಜಿ ಅವರೊಬ್ಬರನ್ನು ಬಿಟ್ಟು ಇನ್ಯಾರನ್ನೂ ರಶ್ಯಕ್ಕೆ ಕಳುಹಿಸಲು ಜಪಾನೀಯರು ಒಪ್ಪಲಿಲ್ಲ.ಹೀಗಾಗಿ ತೈಪೇಯಲ್ಲಿ ತಥಾಕಥಿಕ ವಿಮಾನ ದುರಂತ ನಡೆಯಲೇ ಇಲ್ಲ; ನಡೆದಿದ್ದರೂ ಆ ವಿಮಾನದಲ್ಲಿ ನೇತಾಜಿ ಇರಲಿಲ್ಲ. ಆದರೆ, ಮುಂದೆ ನೇತಾಜಿ ಅವರಿಗೇನಾಯಿತು, ಅವರು ಹೇಗೆ, ಎಲ್ಲಿ ಮೃತಪಟ್ಟರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಆದ್ದರಿಂದ ಪ್ರತಿ ವರ್ಷ ನಾವು ನೇತಾಜಿ ಜನ್ಮದಿನವನ್ನು ಆಚರಿಸೋಣ, ಪುಣ್ಯತಿಥಿಯನ್ನುಆಚರಿಸದಿರೋಣ.''ಅಂದು, ಆ.17ರಂದು ನಸುಕಿನ 4 ಗಂಟೆಗೆ ನೇತಾಜಿಆಜಾದ್‌ ಹಿಂದ್‌ ಸರಕಾರದ ಸಚಿವ ಜಾನ್‌ ತಿವಿಗೆ ದೀರ್ಘ‌ ಪತ್ರವೊಂದನ್ನು ಬರೆದಿದ್ದರು. ಅದರ ಒಂದು ಸಾಲು ಹೀಗಿದೆ -"ದೀರ್ಘ‌ ವೈಮಾನಿಕ ಯಾನವೊಂದರ ಹೊಸ್ತಿಲಲ್ಲಿದ್ದೇನೆ ಮತ್ತು ಈ ಯಾನದ ಮಧ್ಯೆ ಒಂದು ಅಪಘಾತ ಸಂಭವಿಸಲೂ ಬಹುದು'. "ನೇತಾಜಿ ಬ್ಯಾಂಕಾಕ್‌ ಬಿಡುವ ಮುನ್ನವೇ ವಿಮಾನ ದುರಂತದ ಕಥೆಯನ್ನು ಹೊಸೆಯಲಾಗಿತ್ತು ಎಂಬುದೇ ತನ್ನ ದೃಢ ನಂಬಿಕೆ' ಎಂದು ಮೇ| ಭಾಸ್ಕರನ್‌ ಬರೆದಿದ್ದಾರೆ.
-----------Orchid---------------
ಸಪ್ಟಂಬರ್ ೧೧ ಎಂದಾಕ್ಷಣ ಮತ್ತೆ ಮತ್ತೆ ನೆನಪಾಗುವ ಆ ೧೧೨ ವರುಷಗಳ ಹಿಂದೆ ಅಮೇರಿಕದ ಚಿಕ್ಯಾಗೋದಲ್ಲಿನ ಭಾರತೀಯ ಸಿಂಹದ ಘರ್ಜನೆ...
ಈ ಹಿಂದೆ ಸ್ವಾಮಿ ವಿವೇಕಾನಂದರನ್ನ ಕುರಿತು ಬೆತ್ತಲೆ ಜಗತ್ತಿನಲ್ಲಿ ಪ್ರತಾಪ್ ಸಿಂಹ ಬರೆದಿದ್ದ ಅಂಕಣ .
ಅವರನ್ನು ನೆನಪಿಸಿಕೊಂಡರೆ ಸ್ವಾಭಿಮಾನ ಪುಟಿಯುತ್ತದೆ!
1893
ಭಾರತೀಯರಾದ ನಾವು ಈ ವರ್ಷ ವನ್ನು ಮರೆಯಲು ಸಾಧ್ಯವೇ? “Sisters and Brothers of America” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ ಸಲುವಾಗಿ ಹಿಂದೂಧರ್ಮದ ಅವಹೇಳನದಲ್ಲಿ ತೊಡಗಿದ್ದರು.
ವಿವೇಕಾನಂದರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲೂ ಹಾಗೇ ಆಯಿತು. ಮಾತಿಗೆ ಎದ್ದು ನಿಂತ ವಿವೇಕಾನಂದರು ಒಂದಿಷ್ಟು ಕಾಲ ವಾಗ್ಝರಿಯನ್ನು ಹರಿಸಿ ಸಭೆಯಲ್ಲಿ ನೆರೆದಿದ್ದವರಿಗೆಲ್ಲ ಒಂದು ಪ್ರಶ್ನೆ ಕೇಳಿದರು.
ನಿಮ್ಮಲ್ಲಿ ಎಷ್ಟು ಜನ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದೀರಿ?
ಸಾವಿರಾರು ಜನ ನೆರೆದಿದ್ದ ಆ ಸಭೆಯಲ್ಲಿ ಕೈಮೇಲೇರಿದ್ದು ಒಂದಿಬ್ಬರದ್ದು ಮಾತ್ರ! ನಮ್ಮ ಧರ್ಮದ ಬಗ್ಗೆ ಒಂದಿನಿತೂ ಓದಿ ತಿಳಿದುಕೊಳ್ಳದೆ ಹಿಂದೂ ಧರ್ಮವನ್ನು ಮೌಢ್ಯ, ಮೂಢನಂಬಿಕೆ, ಗೊಡ್ಡುಗಳಿಂದ ಕೂಡಿರುವ ಅನಾಗರಿಕ ಧರ್ಮಎಂದು ಅವಹೇಳನ ಮಾಡುತ್ತಿದ್ದೀರಲ್ಲಾ ನಿಮಗೆಷ್ಟು ಧಾರ್ಷ್ಟ್ಯ?! ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಡೀ ಸಭೆಯೇ ಮೂಕವಿಸ್ಮಿತವಾಗಿ ಕುಳಿತುಕೊಳ್ಳುತ್ತದೆ.
ಅಲ್ಲಿಂದ ಬ್ರಿಟನ್‌ಗೆ ಬಂದರು.
ಹತ್ತಾರು ಭಾಷಣ, ಸಂವಾದ, ಚರ್ಚಾಕೂಟಗಳಿಗೆ ಅಲ್ಲೂ ಆಹ್ವಾನ ಬಂತು. ಹಾಗೊಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿವೇಕಾನಂದರು ಬ್ರಿಟಿಷ್ ಆಡಳಿತದ ವಿರುದ್ಧ ಕಟು ಟೀಕೆ ಮಾಡುತ್ತಿದ್ದರು. ಅದನ್ನು ಕಂಡ ಬ್ರಿಟಿಷ್ ಪತ್ರಕರ್ತರು ಸಿಡಿಮಿಡಿಗೊಂಡಿದ್ದರು. ಆದರೇನಂತೆ ವಿವೇಕಾನಂದರು ಮಾತ್ರ ಟೀಕಾಪ್ರಹಾರವನ್ನು ಮುಂದುವರಿಸಿಯೇ ಇದ್ದರು. ಹಾಗೆ ಟೀಕೆ ಮಾಡುತ್ತಿದ್ದ ಅವರು ಮಾತಿನ ಮಧ್ಯೆ, “ಆದರೂ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ” ಎಂದುಬಿಟ್ಟರು!!
ಮೊದಲೇ ಕುಪಿತಗೊಂಡಿದ್ದ ಬ್ರಿಟಿಷ್ ಪತ್ರಕರ್ತರಿಗೆ ಬ್ರಹ್ಮಾಸ್ತ್ರ ಸಿಕ್ಕಿದಂತಾಯಿತು. “ಇದುವರೆಗೂ ಬ್ರಿಟಿಷ್ ಸರಕಾರವನ್ನು ಭಾರೀ ಭಾರೀ ಟೀಕೆ ಮಾಡುತ್ತಿದ್ದಿರಲ್ಲಾ, ಇದ್ದಕ್ಕಿದ್ದಂತೆಯೇ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ ಎಂದಿದ್ದೇಕೆ? ಭಯವಾಯಿತೇ?!” ಎಂದು ಕಿಚಾಯಿಸಿದರು. ವಿವೇಕಾನಂದರು ನಿರುತ್ತರರಾಗಿ ನಿಲ್ಲುತ್ತಾರೆ, ಅವಮರ್ಯಾದೆಗೆ ಒಳಗಾಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಹಸನ್ಮುಖಿಯಾಗಿಯೇ ನಿಂತಿದ್ದ ವಿವೇಕಾನಂದರು ಬಾಯಿ ತೆರೆದರು…
“ನೋಡಿ, ಬ್ರಿಟನ್ ರಾಣಿ ವಿಕ್ಟೋರಿಯಾ ವಿಧವೆ. ನಮ್ಮ ಭಾರತ ದಲ್ಲಿ ವಿಧವೆಯರಿಗೆ ಬಹಳ ಗೌರವ ಕೊಡುತ್ತೇವೆ” ಎಂದರು!
ಗಪ್ಪಾಗುವ ಸರದಿ ಪತ್ರಕರ್ತರದ್ದಾಗಿತ್ತು. ವಿವೇಕಾನಂದರು ಬರೀ ಒಬ್ಬ ಸ್ವಾಮೀಜಿ, ಹಿಂದೂಧರ್ಮವನ್ನು ಉದ್ಧಾರ ಮಾಡಲು ಅವತರಿಸಿ ಬಂದ ಮಹಾಪುರುಷ, Messiah ಮಾತ್ರ ಎಂದು ಭಾವಿಸಬೇಡಿ. ಅವರಿಗೆ ತುಂಬಾ ಹಾಸ್ಯಪ್ರeಯೂ ಇತ್ತು, Presence of Mind ಅಂತಾರಲ್ಲಾ ಅದಂತೂ ಅದ್ಭುತ. ಗಂಭೀರವಾದ, ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಎದುರಾದಾಗಲೂ ಕೋಪಿಸಿಕೊಳ್ಳದೆ ತುಂಬಾ witty ಆಗಿ ಉತ್ತರಿಸುತ್ತಿದ್ದರು. ಬ್ರಿಟನ್ನಿನಲ್ಲೇ ಮತ್ತೊಂದು ಸಭೆ ನಡೆಯುತ್ತಿತ್ತು. ವಿವೇಕಾನಂದರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಎಲ್ಲರೂ ಆಶ್ಚರ್ಯಚಕಿತರಾಗಿ ಮಾತು ಕೇಳುತ್ತಿದ್ದರೆ ಒಬ್ಬ ಫಿರಂಗಿ ಮಾತ್ರ ವಿವೇಕಾನಂದರ ಕಾಲೆಳೆಯಲು ಹವಣಿಸುತ್ತಿದ್ದ.
ಫಿರಂಗಿ: What is the difference between Monk and a Monkey?
ವಿವೇಕಾನಂದ: Just Arms difference!
ಪ್ರಶ್ನಿಸಿದ ಫಿರಂಗಿ ವಿವೇಕಾನಂದರಿಂದ ಸರಿಸುಮಾರು ಮೊಳಕೈ ದೂರದಲ್ಲಿದ್ದ!! ಹಾಗಂತ ಎಲ್ಲ ಪ್ರಶ್ನೆಗಳಿಗೂ ಅವರು ತಿಳಿಹಾಸ್ಯ ದಲ್ಲೇ ಉತ್ತರಿಸುತ್ತಿ ದ್ದರು ಎಂದರ್ಥವಲ್ಲ. ಒಮ್ಮೆ ಹೀಗೂ ಆಯಿತು. ವಿವೇಕಾನಂದರು ಬುದ್ಧನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ಭಾಷಣ ವೊಂದರಲ್ಲಿ ಬುದ್ಧನ ಬಗ್ಗೆಯೇ ಹೇಳುತ್ತಿದ್ದರು, ಬಹುವಾಗಿ ಹೊಗಳುತ್ತಿದ್ದರು. ಇದನ್ನು ಕಂಡ ಬ್ರಿಟಿಷನೊಬ್ಬ ಕೇಳುತ್ತಾನೆ-ಬುದ್ಧ ಅಷ್ಟು ಗ್ರೇಟ್, ಇಷ್ಟು ಗ್ರೇಟ್ ಎನ್ನುತ್ತಿದ್ದೀರಲ್ಲಾ, ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲರೂ ಬ್ರಿಟನ್‌ಗೆ ಬಂದುಹೋಗಿದ್ದಾರೆ. ನಿಮ್ಮ ಬುದ್ಧ ಗ್ರೇಟ್ ಆಗಿದ್ದನೆನ್ನುವುದಾದರೆ ಆತನೇಕೆ ಬ್ರಿಟನ್‌ಗೆ ಭೇಟಿ ಕೊಡಲೇ ಇಲ್ಲ?!
ವಿವೇಕಾನಂದ: ಬುದ್ಧ ಬದುಕಿದ್ದಾಗ ನಿನ್ನ ಯುರೋಪ್ ಎಲ್ಲಿತ್ತು? ನಿನ್ನ ಬ್ರಿಟನ್ ಎಲ್ಲಿತ್ತು? ಅಮೆರಿಕವೆಲ್ಲಿತ್ತು?!
ಅದಕ್ಕಿಂತ ತಪರಾಕಿ ಬೇಕೆ?! ಬುದ್ಧ ಅವತರಿಸಿದ್ದು ಕ್ರಿಸ್ತ ಪೂರ್ವ ದಲ್ಲಿ. ಆಗ ಬ್ರಿಟನ್ನೂ ಇರಲಿಲ್ಲ, ಯುರೋಪೂ ಇರಲಿಲ್ಲ, ಅಷ್ಟೇಕೆ ಕ್ರಿಶ್ಚಿಯಾನಿಟಿಯೇ ಇರಲಿಲ್ಲ!! ವಿವೇಕಾನಂದರ ಜತೆ ಬ್ರಿಟನ್‌ಗೂ ಆಗಮಿಸಿದ್ದ ಸಿಸ್ಟರ್ ನಿವೇದಿತ ಎಷ್ಟು ಪ್ರಭಾವಿತಳಾಗಿದ್ದಳೆಂದರೆ, ನಾನೂ ಭಾರತಕ್ಕೆ ಬರುತ್ತೇನೆ, ನಿಮ್ಮ ದೇಶಸೇವೆಗೆ ನಾನೂ ಸಹಾಯ ಮಾಡುತ್ತೇನೆ ಎಂದಳು. “ನೋಡು…ಇತರ ಧರ್ಮಗಳ ಕಟ್ಟುಪಾಡುಗಳು, ಕಟ್ಟಳೆಗಳು ಅಷ್ಟಾಗಿ ತಾರ್ಕಿಕವಾಗಿರುವುದಿಲ್ಲ, ವಿeನಕ್ಕೆ ಹತ್ತಿರವಾಗಿರುವುದಿಲ್ಲ. ಹಾಗಾಗಿ ಮೊದಲು ಪರಾಮರ್ಶೆ ಮಾಡಿ, ನಂತರ ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಧರ್ಮದ ರೀತಿ ರಿವಾಜುಗಳು ತರ್ಕಬದ್ಧವಾಗಿರುತ್ತವೆ, ವಿeನಕ್ಕೆ ಅನುಗುಣವಾಗಿರುತ್ತವೆ. ಅವುಗಳನ್ನು ಮೊದಲು ಒಪ್ಪಿಕೊಂಡು ಅನುಸರಿಸಬೇಕು, ಕ್ರಮೇಣ ಆ ಕಟ್ಟುಪಾಡುಗಳ ಹಿಂದೆ ಇರುವ ತರ್ಕ, ಆಶಯ ಅರಿವಾಗುತ್ತದೆ. ಪಾಶ್ಚಿಮಾತ್ಯಳಾದ ನೀನು ಭಾರತಕ್ಕೆ ಬಂದ ನಂತರ ಅದೇಕೆ, ಇದೇಕೆ ಎಂದು ಪ್ರಾರಂಭದಲ್ಲೇ ಪ್ರಶ್ನಿಸಬೇಡ” ಎನ್ನುತ್ತಾ ಹೀಗೆ ಹೇಳುತ್ತಾರೆ- Anything that is western origin, first you verify it, then accept it. Anything that is Indian origin, first accept it, then verify it if necessary.
ಅವರಿಗೆ ಹಿಂದೂ ಧರ್ಮದ ಬಗ್ಗೆ ಅಷ್ಟೊಂದು ಬಲವಾದ ನಂಬಿಕೆಯಿತ್ತು.
ನೀವು ರೋಮಿ ರೋಲ್ಯಾಂಡ್(Romain Rolland) ಹೆಸರು ಕೇಳಿರಬಹುದು. ಆತ ಫ್ರೆಂಚ್ ನಾಟಕಕಾರ, ಇತಿಹಾಸಕಾರ, ಕಾದಂಬರಿಕಾರ. ಒಮ್ಮೆ ಈ ರೋಮಿ ರೋಲ್ಯಾಂಡ್ ಹಾಗೂ ರವೀಂದ್ರನಾಥ ಟಾಗೋರ್ ಪರಸ್ಪರ ಭೇಟಿಯಾಗುತ್ತಾರೆ. ಇಬ್ಬರೂ ಹೆಚ್ಚೂಕಡಿಮೆ ಸಮಕಾಲೀನರು. ರವೀಂದ್ರನಾಥ್ ಟಾಗೂರರಿಗೆ 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ದೊರೆತರೆ, ರೋಮಿ ರೋಲ್ಯಾಂಡ್ 1915ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದವರು. ಇಂತಹ ದಿಗ್ಗಜರ ಭೇಟಿ ಚರ್ಚೆಗೆ ತಿರುಗುತ್ತದೆ. ನನಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕು, ಅದಕ್ಕೆ ಯಾವ ಪುಸ್ತಕವನ್ನು ಓದಬೇಕು ಎಂದು ರೋಮಿ ರೋಲ್ಯಾಂಡ್ ಕೇಳುತ್ತಾರೆ. “If you want to know India, study Vivekananda. In him everything is positive, nothing negative” ಎನ್ನುತ್ತಾರೆ ರವೀಂದ್ರನಾಥ ಟಾಗೂರ್!! ರೋಮಿ ರೋಲ್ಯಾಂಡ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ವಿವೇಕಾನಂದರ ಎಲ್ಲ ಭಾಷಣ, ಚಿಂತನೆಗಳಿದ್ದಿದ್ದು ಇಂಗ್ಲಿಷ್‌ನಲ್ಲಿ ಮಾತ್ರ. ಕೊನೆಗೆ ತನ್ನ ಅಕ್ಕನಿಂದ ಓದಿಸಿ, ಹೇಳಿಸಿಕೊಂಡು ವಿವೇಕಾನಂದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂತಹ ನೊಬೆಲ್ ಪುರಸ್ಕೃತನೇ ವಿವೇಕಾನಂದರ ಬಗ್ಗೆ ಎಷ್ಟು ಸಮ್ಮೋಹಿತನಾಗುತ್ತಾನೆಂದರೆ, “The Life of Vivekananda and The universal Gospel” ಎಂಬ ಪುಸ್ತಕ ಬರೆಯುತ್ತಾನೆ. “I look upon Swamy Vivekananda as a fire of spiritual energy” ಎಂದು ತನ್ನ ಮೇಲಾದ ಪ್ರಭಾವವನ್ನು ಹೇಳಿಕೊಳ್ಳುತ್ತಾನೆ.
ಅಂತಹ ವಿವೇಕಾನಂದರು ಜನಿಸಿದ ನಾಡು ನಮ್ಮದು.
ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ಅವರನ್ನು “ಹಿಂದೂ ಧರ್ಮದ ರಾಯಭಾರಿ” ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the global face of India. He was the first Ambassador of modern India to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಷನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ Indian ethos, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. “Hands that serve are holier than the lips that pray” (ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು)- ಈ ಮಾತನ್ನು ಹೇಳಿದ್ದು ಗಾಂಧಿ ಎನ್ನುವವರಿದ್ದಾರೆ. ಅಲ್ಲಾ… ಅಲ್ಲಾ… ಮದರ್ ತೆರೇಸಾ ಎಂದು ಆಕೆಯ ತಲೆಗೆ ಕಟ್ಟುವವರಿದ್ದಾರೆ. ಸ್ವಾಮಿ ಸುಖಬೋಧಾನಂದ ಹಾಗೂ “ಯು ಕೆನ್ ವಿನ್” ಪುಸ್ತಕ ಬರೆದ ಶಿವ ಖೇರಾ ತಮ್ಮದೇ ಆದ ಪದಗಳಲ್ಲಿ ಅದೇ ವಾಕ್ಯವನ್ನು ರೀಸೈಕ್ಲ್ ಮಾಡಿದ್ದೂ ಇದೆ. Make no mistake, ಆ ಮಾತನ್ನು ಹೇಳಿದ್ದು ಸ್ವಾಮಿ ವಿವೇಕಾನಂದರು! ತುಂಬ articulate ಆಗಿ, extempore ಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life” (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ “ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!
ಹಾಗಂತ ವಿವೇಕಾನಂದರು ಹಿಂದೂ ಧರ್ಮವನ್ನು ಬರೀ ರೋಮ್ಯಾಂಟಿಸೈಝ್ ಮಾಡಲಿಲ್ಲ, ಹುಳುಕುಗಳನ್ನೂ ಹೇಳಿದರು. “Hinduism should reform, if not it will collapse on its own weight” ಎಂದು ಅದರ ಲೋಪಗಳನ್ನು ಎತ್ತಿತೋರಿದರು. ಇವತ್ತು ಒಬ್ಬ ಸಮಾಜವಾದಿ, ಸಮತಾವಾದಿ ಕೂಡ ಅವರನ್ನು ಒಪ್ಪಿಕೊಳ್ಳುತ್ತಾನೆ. ಗಾಂಧಿಯನ್ನು ಟೀಕಿಸುವವರಿದ್ದಾರೆ, ಆದರೆ ವಿವೇಕಾನಂದರನ್ನು ಟೀಕಿಸುವವರನ್ನು ಕಾಣುವುದು ಕಷ್ಟ. ಈಗೀಗ ನಮ್ಮ ಪಾರ್ಲಿಮೆಂಟನ್ನು ನೋಡಿ ಕೊಂಡು ಎಲ್ಲರೂ ಯೂತ್ ಪವರ್ ಬಗ್ಗೆ ಮಾತನಾಡುತ್ತಿದ್ದಾರೆ, ಯೂತ್ ಬಂದರೆ ಭಾರತ ಬದಲಾಗುತ್ತದೆ ಎನ್ನುತ್ತಿದ್ದಾರೆ. ವಿವೇಕಾ ನಂದರು 115 ವರ್ಷಗಳ ಹಿಂದೆಯೇ ಯುವಶಕ್ತಿ ಬಗ್ಗೆ ಹೇಳಿದ್ದರು. ಯೂತ್ ಎಂದರೆ ಯೌವನವಲ್ಲ, Free from prejudice, ಬೇರೆಯವರ ಒಳಿತನ್ನೂ ಬಯಸುವ ಮನಃಸ್ಥಿತಿ ಎಂದಿದ್ದರು.
1000 ವರ್ಷಗಳ ಕಾಲ ಬಾಹ್ಯಶಕ್ತಿಗಳ ಆಕ್ರಮಣ, ಆಡಳಿತ, ನಮ್ಮ ಜನರ ಕಗ್ಗೊಲೆ, ಅತ್ಯಾಚಾರ, ಮತಾಂತರ… ಇವುಗಳನ್ನು ತಡೆಯಲು ಒಂದು ವಿಜಯನಗರ ಸಾಮ್ರಾಜ್ಯ, ಒಬ್ಬ ಶಿವಾಜಿ, ಒಬ್ಬ ರಾಣಾ ಪ್ರತಾಪ್, ಒಬ್ಬ ಗುರು ಗೋವಿಂದ ಸಿಂಗ್, ದಯಾನಂದ ಸರಸ್ವತಿ ಅವತರಿಸಿ ಬಂದರು. ಅವರ ನಂತರ ಭಾರತದ Global face ಆಗಿ ಬಂದವರೇ ವಿವೇಕಾನಂದ. ಇಂತಹವರು ಹುಟ್ಟಿಬಂದ ಕಾರಣವೇ ಬಾಹ್ಯಶಕ್ತಿಗಳು ಭಾರತೀಯರನ್ನು ಕೊಂದರೂ ‘ಭಾರತೀಯತೆ’ಯನ್ನು ನಾಶಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಜನವರಿ 12 ವಿವೇಕಾನಂದರ ಜನ್ಮದಿನ.
ಮತ್ತೊಬ್ಬ ವಿವೇಕಾನಂದ ಅವತರಿಸಿ ಬರಲಿ ಎಂದು ನಿರೀಕ್ಷಿಸುವ ಬದಲು ಅವರ ಸಂದೇಶವನ್ನು ಅರಿತುಕೊಂಡು, ಈ ದೇಶ, ಧರ್ಮವನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಾವೇ ಮಾಡುವುದು ಒಳಿತಲ್ಲವೆ?
------------Orchid--------------
ಒಮ್ಮೆ TVವರದಿಗಾರನೊಬ್ಬ ರೈತನ Live ಸಂದರ್ಶನ ಮಾಡುತ್ತಿದ್ದ.
ವರದಿಗಾರ: ನಿವು ಕುರಿಗೆ ಯೇನು ತಿನ್ನಿಸ್ತೀರಿ?
ರೈತ: ಬಿಳಿಕುರಿಗೋ? ಕರೆ ಕುರಿಗೋ?
ವರದಿಗಾರ: ಬಿಳಿ.
ರೈತ: ಹುಲ್ಲು....
ವರದಿಗಾರ: ಮತ್ತೆ ಕರೇದಕ್ಕೆ?
ರೈತ: ಅದಕ್ಕೂ ಹುಲ್ಲು...
ವರದಿಗಾರ: ನೀವು ಈ ಕುರಿಗಳನ್ನಾ ಯೆಲ್ಲಿ ಕಟ್ತೀರಿ?
ರೈತ: ಕರೇದನ್ನೋ? ಬಿಳೇದನ್ನೋ?
ವರದಿಗಾರ: ಬಿಳೇದು...
ರೈತ: ಹೊರಗಿನ ಕೋಣೆಯಲ್ಲಿ..
ವರದಿಗಾರ: ಕರೇದನ್ನಾ..?
ರೈತ: ಅದನ್ನೂ ಹೊರಗಿನ ಕೋಣೆಯಲ್ಲಿಯೇ...
ವರದಿಗಾರ: ಮತ್ತೆ ಅವುಗಳಿಗೆ ಸ್ನಾನಾ ಮಾಡ್ಸೋದು ಹೇಗೆ?
ರೈತ: ಕರೇದಕ್ಕೋ? ಬಿಳೇದಕ್ಕೋ...?
ವರದಿಗಾರ: ಬಿಳೇದಕ್ಕೆ...
ರೈತ: ನೀರಿನಿಂದ...
ವರದಿಗಾರ: ಕರೇದಕ್ಕೆ...?
ರೈತ: ಅದಕ್ಕೂ ನೀರಿಂದಲೇ...
ವರದಿಗಾರನಿಗೆ ಕೋಪ ನೆತ್ತಿಗೇರಿತು, ಕಿರುಚವಂತೇ ಹೇಳಿದ: ಮೂರ್ಖ! ಯೆರಡಕ್ಕೂ ವಂದೇರೀತಿ ಮಾಡೋದು ಅಂದ್ಮೇಲೆ ಪದೇ ಪದೇ ಕರೇದೊ ಬಿಳೇದೋ ಅಂತಾ ಯಾಕಯ್ಯಾ ಕೇಳ್ತಿದ್ದೆ?
ರೈತ: ಯಾಕಂದ್ರೆ... ಕಪ್ಪು ಕುರಿ ನಂದು....
ವರದಿಗಾರ: ಮತ್ತೆ ಬಿಳೇದು...?
ರೈತ: ಅದೂ...ನಂದೇ!...
ವರದಿಗಾರ ಮೂರ್ಛೆಹೋದ!!!
ಪ್ರಜ್ಞೆ ಬಂದಮೇಲೆ ರೈತ ಹೇಳಿದ, ಈಗ ಗೂತ್ತಾಯ್ತಾ? TVಲಿ ನೀವು ಅದೇ ಅದೇ ಸಮಾಚಾರಾನಾ ಮತ್ತೆ ಮತ್ತೆ ತಿರ್ಗಾ ಮುರ್ಗಾ ತೋರ್ಸೀ ತೋರ್ಸೀ ನಮ್ತಲೇ ತಿಂತೀರಲ್ಲಾ ಆವಾಗಾ ನಮ್ಗೂ ಹೀಗೇ ಬೇಜಾರಾಗತ್ತೆ...!
------------Orchid-----------------
ಪ್ರೀತಿಸಿದ ಹುಡುಗಿ ಅದೆಂಥಾ ಮೋಸ ಮಾಡಿಬಿಟ್ಲು..! ಮಾಡಿದ ಮೋಸಕ್ಕೆ ಅವಳ ಬದುಕು ಏನಾಯ್ತು ಗೊತ್ತಾ..? ರಿಯಲ್ ಸ್ಟೋರಿ
ನೂರು ಸಲ ಫೋನ್ ಮಾಡಿದ್ರೂ ಅವಳು ಫೋನ್ ಎತ್ತಲೇ ಇಲ್ಲ..! ಮೆಸೇಜ್ ಮಾಡ್ದೆ, ಅದಕ್ಕೂ ರಿಪ್ಲೆ ಇಲ್ಲ..! ಏನಾಯ್ತು ಅಂತ ಅರ್ಥಾನೆ ಆಗ್ಲಿಲ್ಲ. ಕೊನೆಗೊಂದು ಮೆಸೇಜ್ ಬಂತು, ಅದು ಅವಳದೇ..! `ತುಂಬಾ ಜ್ವರ ಬಂದಿದೆ ಕಣೋ, ನಾಳೆ ಸಿಗ್ತೀನಿ..ಅಂತ..!’ ಭಯ ಆಯ್ತು, ಬೈಕ್ ಹತ್ತಿ ಅದರ ಕಿವಿಹಿಂಡಿ ಹೊರಟೇಬಿಟ್ಟೆ..! ಅವಳ ಪಿ.ಜಿ ಎದುರು ನಿಂತು ಮತ್ತೆ 10 ಸಲ ಫೋನ್ ಮಾಡಿದ್ರೂ ಅವಳು ಫೋನ್ ಎತ್ತುತಿಲ್ಲ, ಅವಳ ಫ್ರೆಂಡ್ ನಂಬರ್ ಟ್ರೈ ಮಾಡ್ದೆ. ಅವಳೂ ಎತ್ತುತಿಲ್ಲ..! ಮತ್ತೆ ಭಯವಾಯ್ತು..! ಅದು ಹುಡಗೀರ ಪಿ.ಜಿ, ನಾನು ಹೋಗೋಕಾಗಲ್ಲ. ಆದ್ರೆ ಏನ್ ಮಾಡೋದು..? ನನ್ನ ಹುಡುಗಿ ಜ್ವರ ಬಂದು ಮಲಗಿದ್ದಾಳೆ..! ಮಳೆ ಬೇರೆ ಬರ್ತಿದೆ..! ಪಿ.ಜಿ ಎದುರಿಗಿದ್ದ ಮರದ ಕೆಳಗೆ ಅರ್ಧಂಬರ್ಧ ನೆನೀತಾ ಅವಳ ಫೋನ್ ಟ್ರೈ ಮಾಡ್ತಾನೇ ಇದ್ದೆ..! ಎಷ್ಟು ಮಾಡಿದ್ರೂ ನೋ ರೆಸ್ಪಾನ್ಸ್..! ಗಂಟೆ 11.. ಆದ್ರೆ ಅವಳಿಂದ ಏನೂ ಸುದ್ದೀನೇ ಇಲ್ಲ..! ಆದ್ರೆ ಅಷ್ಟು ಹೊತ್ತಿಗೆ ಅವಳ ಪಿ.ಜಿ ಎದುರಿಗೆ ಒಂದು ಬಿ.ಎಮ್.ಡಬ್ಲ್ಯೂ ಕಾರ್ ಬಂತು ನಿಲ್ತು..! ನಾನು ಮಳೆಯಿಂದ ತಪ್ಪಿಸಿಕೊಳ್ಳೋಕೆ ಮರದ ಕೆಳಗೆ ಮರೆಯಲ್ಲಿ ನಿಂತಿದ್ದೆ. ಡ್ರೈವರ್ ಸೀಟಿನಲ್ಲಿದ್ದವನು ಮಳೆಯಲ್ಲೇ ತಲೆಯ ಮೇಲೆ ಕೈ ಅಡ್ಡ ಹಿಡ್ಕೊಂಡು ಈ ಕಡೆ ಬಂದು ಡೋರ್ ತೆಗೆದ..! ಕೆಳಗೆ ಇಳಿದ ಹುಡುಗಿ ತೊಡೆ ಕಾಣೋ ಕಪ್ಪು ಡ್ರೆಸ್ ಹಾಕಿದ್ಲು.. ಅವನ ಕೈ ಹಿಡ್ಕೊಂಡು ಪಿ.ಜಿ ಬಾಗಿಲ ತನಕ ಓಡಿ ಹೋದ್ಲು..! ವಾಪಸ್ ಹೋಗೋ ಮುಂಚೆ ಅವನ ಕೆನ್ನೆಗೆ ಮುತ್ತಿಟ್ಟು ನಾಳೆ ಸಿಗ್ತೀನಿ ಅಂತ ಹೀಲ್ಡ್ ಚಪ್ಪಲಿ ಟಕ್ ಟಕ್ ಶಬ್ದ ಮಾಡ್ತಾ ಹೋದ್ಲು..! ಅವನು ಬಂದು ಮತ್ತೆ ಕಾರ್ ಹತ್ತಿ ಬರ್ರ್ ಅಂತ ಹೋಗಿಬಿಟ್ಟ..! ಅವನ್ಯಾರೋ ನಂಗೊತ್ತಿಲ್ಲ..! ಆದ್ರೆ ಅವಳು ಅವಳೇ, ಯಾರಿಗೋಸ್ಕರ ನಾನು ಅಷ್ಟು ಹೊತ್ತು ಮಳೆಯಲ್ಲಿ ಕಾಯ್ತಾ ನಿಂತಿದ್ನೋ ಅವಳೇ.. ಯಾರಿಗೆ ಹುಷಾರಿಲ್ಲ ಅಂತ ಗೊತ್ತಾದ ತಕ್ಷಣ 15 ಕಿಲೋಮೀಟರ್ ಬೈಕ್ ಓಡಿಸಿಕೊಂಡು ಬಂದು ಚಳೀಲಿ ನಡುಗ್ತಾ ಕಾಯ್ತಾ ಇದ್ನೋ ಅವಳೇ..! ನನ್ನ ಹುಡುಗಿ ಅವಳು… ! ಚಳಿಗೂ ನಡುಗದ ದೇಹ, ಆ ದೃಶ್ಯ ನೋಡಿ ಗಡಗಡ ನಡುಗ್ತಾ ಇತ್ತು..! ಅವಳು ನಂಗೆ ಮೋಸ ಮಾಡಿಬಿಟ್ಲು ಅಂತ ನಾನು ಅದ್ಹೇಗೆ ತಾನೇ ಒಪ್ಪಿಕೊಳ್ಳಿ..? ನೋ ಇಂಪಾಸಿಬಲ್..!
ಅವನು ಮಂಗಳೂರ ಹುಡುಗ, ಹೀಗೆ ತನ್ನ ನೋವು ಹೇಳ್ಕೋತಾನೆ..! ಬೆಂಗಳೂರಿನ ಪ್ರತಿಷ್ಟಿತ ಆಫೀಸೊಂದರಲ್ಲಿ ಅವನಿಗೆ ಒಳ್ಳೇ ಕೆಲಸ, ಕೈತುಂಬಾ ಸಂಬಳ..! ಎಲ್ಲರ ಜೊತೆ ಬಾಯಿ ತುಂಬಾ ಮಾತಾಡ್ತಿದ್ದ..! ಆಫೀಸಿನಲ್ಲಿ ಎಲ್ಲರಿಗೂ ಅವನಂದ್ರೆ ಸಖತ್ ಇಷ್ಟ.. ಎಲ್ಲರ ಮನೆಯ ಊಟದಲ್ಲೂ ಅವನಿಗೆ ಪಾಲಿತ್ತು..! ಅವತ್ತು ಜೂನ್ ತಿಂಗಳ ಮೊದಲ ಶುಕ್ರವಾರ ಅವಳು ಬಂದು ರೆಸೆಪ್ಷನ್ ನಲ್ಲಿ ಕೂತಿದ್ಲು. ನೊಡೋಕೆ ಲಕ್ಷಣವಾಗಿದ್ಲು. ಸ್ನಾನ ಮುಗಿದರೂ ಅವಳ ತಲೆಗೆ ಹಾಕಿದ್ದ ಎಣ್ಣೆ ಪಸೆ ಹಾಗೇ ಇತ್ತು..! ಅದರ ಒಂದು ಬದಿಯಲ್ಲಿ ಕ್ಲಿಪ್ಪಿಗೆ ಸಿಕ್ಕಿಹಾಕ್ಕೊಂಡಿದ್ದ ಮಲ್ಲಿಗೆ ಹೂವು..! ಇವನ ಕಣ್ಣಿಗೆ ಬಿದ್ದ ಆ ಹುಡುಗಿ ಇಂಟರೆಸ್ಟಿಂಗ್ ಅನ್ಸಿದ್ಲು..! ಯಾರು ಬೇಕು ಅಂತ ಕೇಳ್ದ, ಮನೋಜ್ ಅವರನ್ನು ನೋಡ್ಬೇಕು ಅಂತ ಹೇಳಿದ್ಲು ಅವಳು..`ಯೆಸ್ ನಾನೇ ಮನೋಜ್..!’ ಅಂದೆ..! ಪ್ರವೀಣ್ ನಿಮ್ಮನ್ನು ಮೀಟ್ ಮಡೋಕೆ ಹೇಳಿದ್ರು ಅಂದ್ಲು..! ಓ ಅದು ನೀವೇನಾ..? ನಿಮ್ಮ ಹೆಸರು ಸುಮ ಅಲ್ವಾ..? ಅಂತ ಅವಳನ್ನು ಆಫೀಸಿನ ಒಳಗೆ ಕರ್ಕೊಂಡ್ ಹೊರಟ.. ಕೂತು ಮಾತಾಡುವಾಗ ಅವಳು ಹೇಳಿದ್ಲು.. ` ನಾನು ಚಿಕ್ಕಮಗಳೂರಿನ ಸಮೀಪದ ಒಂದು ಹಳ್ಳಿಯಿಂದ ಬಂದಿದೀನಿ, ಡಿಗ್ರಿ ಆಗಿದೆ. ಇಂಗ್ಲೀಷ್ ಅಷ್ಟಾಗಿ ಬರಲ್ಲ, ಕಷ್ಟಪಟ್ಟು ಕೆಲಸ ಮಾಡ್ತೀನಿ, ನಂಗೊಂದು ಕೆಲಸ ಕೊಡಿ’..! ಅವಳ ಮುಗ್ದತೆಗೆ ಇವನು ಕ್ಲೀನ್ ಬೋಲ್ಡ್ ..! ಅವನ ಬಾಸ್ ಇವನಿಗೆ ಸಖತ್ ಆಪ್ತ..! ಸಾರ್ ನನ್ನ ಟೀಮಲ್ಲೇ ಟ್ರೇನ್ ಮಾಡ್ತೀನಿ, ಪ್ಲೀಸ್ ಅವಳಿಗೊಂದು ಕೆಲಸ ಕೊಡಿ ಅಂತ ಕೇಳ್ದ..! ಅವನ ಬಾಸ್ ಇಲ್ಲ ಅನ್ನಲಿಲ್ಲ..! ಅಷ್ಟೆ ಅದರ ಮಾರನೇ ದಿನ ಅವಳು ಆಫೀಸಿನ ಎಂಪ್ಲಾಯ್..!
ಅವನು ಅವಳನ್ನು ತಿದ್ದೋ ಕೆಲಸ ಶುರು ಮಾಡ್ದ, ಅವನ ಕೆಲಸ ಬೇಗಬೇಗ ಮುಗಿಸಿ ಅವಳನ್ನು ಕೂರಿಸಿಕೊಂಡು ಇಂಗ್ಲೀಷ್ ಹೇಳಿಕೊಟ್ಟ, ಬೋಲ್ಡ್ ಆಗಿ ಮಾತಾಡೋದು ಹೇಳಿಕೊಟ್ಟ, ಅವಳು ನೋಡನೋಡ್ತಿದ್ದ ಹಾಗೇ ಬದಲಾಗ್ತಾ ಹೋದ್ಲು..! ಇನ್ನು ಅವಳನ್ನು ಬೆಂಗಳೂರಿನ ಸ್ಟೈಲಿಗೆ ಬದಲಾಯಿಸೋ ಕೆಲಸ ಬಾಕಿ ಇತ್ತು..! ಅದಕ್ಕೆ ಮುಂಚೆ ತನ್ನ ಮನಸ್ಸಿನಲ್ಲಿರೋದನ್ನು ಹೇಳಿಬಿಡ್ತೀನಿ ಅಂತ ಡಿಸೈಡ್ ಮಾಡಿ ಅವಳ ಎದುರು ನಿಂತ..` ಸುಮ ಐ ಲವ್ ಯೂ, ನಿಮ್ಮನ್ನ ಮದ್ವೆ ಆಗ್ಬೇಕು ಅನ್ಕೊಂಡಿದೀನಿ..!’ ಅವಳು ಮುಖಮುಖ ನೋಡಿದ್ಲು..! `ತಮಾಷೆ ಮಾಡಬೇಡಿ’ ಅಂದ್ಲು… `ಐ ಆಮ್ ವೆರಿ ಸೀರಿಯಸ್’ ಅಂದ..! ಅವಳು ಮೀ ಟೂ ಅಂತ ನಾಚಿ ಅಲ್ಲಿಂದ ಹೊರಟೇ ಬಿಟ್ಲು.. ಇವನ ಖುಷಿಗೆ ಏನು ಹೇಳಬೇಕು..! ಇಂತಹ ಮುದ್ದಾದ ಹುಡುಗಿ ನಂಗೆ ಸಿಕ್ಕಿದ್ರೆ ಅದೇ ಅದೃಷ್ಟ ಅಂತ ಅವಳನ್ನು ಕರ್ಕೊಂಡು ಒಂದು ಬ್ಯೂಟಿ ಪಾರ್ಲರ್ ಒಳಗೆ ಬಿಟ್ಟ..! ಅವಳು ಅಲ್ಲಿಂದ ಹೊರಗೆ ಬರುವಾಗ ಹಳ್ಳಿ ಸುಮ ಆಗಿರಲಿಲ್ಲ, ಮಾಡರ್ನ್ ಸುಮ ಆಗಿದ್ಲು.. ನಂಬೋಕೆ ಸಾಧ್ಯವಿಲ್ಲದ ಹಾಗೆ ಅವಳ ಚೇಂಜ್ ಓವರ್ ಆಗಿತ್ತು.. ಅಲ್ಲಿಂದ ಒಂದು ಬಟ್ಟೆ ಶೋರೂಂಗೆ ಕರ್ಕೊಂಡು ಹೋಗಿ ಅವಳಿಗೆ 20-30 ಸಾವಿರದಷ್ಟು ಬಟ್ಟೆ ಕೊಡಿಸ್ದ..! ಅದಾದ ಮೇಲೆ ಅವಳ ಲುಕ್, ಲೈಫ್ ಎಲ್ಲಾ ಚೇಂಜ್ ಆಗೋಯ್ತು.. ತಾನು ಮದ್ವೆ ಆಗೋ ಹುಡುಗಿ ಅಂದಮೇಲೆ ಅವಳಿಗೆ ಖರ್ಚು ಮಾಡೋಕೆ ಅವನು ಹಿಂದೆಮುಂದೆ ನೋಡಲೇ ಇಲ್ಲ..! ಅವಳ ಪಿ.ಜಿ ಫೀಸ್, ಊಟದ ಖರ್ಚು, ಪಿಕಪ್ ಡ್ರಾಪ್ ಎಲ್ಲಾ ಮನೋಜ್ ನೋಡ್ಕೋತಿದ್ದ. ಟೋಟಲಿ ಅವಳ ಪ್ರೀತಿಯಲ್ಲಿ ಮನೋಜ್ ಮುಳುಗಿ ಹೋಗಿದ್ದ..! ಹೀಗೇ ದಿನಗಳು ಕಳೀತು.. ಮನೋಜ್ ತನ್ನ ಮನೆಯವರಿಗೆಲ್ಲಾ ಮಾತನಾಡಿಸಿ ಮದ್ವೆಗೆ ಒಪ್ಪಿಸಿದ್ದ..! ಟೈಂ ಬಂದಾಗ ತಾನೂ ಮನೇಲಿ ಒಪ್ಪಿಸ್ತೀನಿ ಅಂದಿದ್ಲು ಸುಮ..! ಹೀಗೇ ಒಂದು ವರ್ಷ ಕಳೀತು, ಅವನಿಗೆ ಮತ್ಯಾವುದೋ ಕಂಪನಿಯಲ್ಲಿ ಕೆಲಸ ಸಿಗ್ತು.. ಆದ್ರೂ ಪ್ರೀತಿ ಹಾಗೇ ಸಾಗ್ತಾ ಇತ್ತು..! ಆದ್ರೆ ಇದ್ದಕ್ಕಿದ್ದ ಹಾಗೇ ಸುಮ ಮನೋಜ್ ಗೆ ಫೋನ್ ಮಾಡೋದು ಕಮ್ಮಿ ಮಾಡಿಬಿಟ್ಲು.. ಯಾವಾಗ ಫೋನ್ ಮಾಡಿದ್ರು `ಐ ಆಮ್ ಬಿಜಿ’ ಅಂತ ರಿಪ್ಲೆ ಬರ್ತಿತ್ತು..! ಆದ್ರೆ ಅವಳ ಪ್ರಪಂಚ ಚೇಂಜ್ ಆಗಿತ್ತು..! ಬೈಕಿನ ಹಿಂದೆ ಕೂತು ಸುಮಳಿಗೆ ಬೋರ್ ಆಗಿತ್ತು..! ಅವಳಿಗೆ ಮತ್ಯಾರದೋ ಪ್ರಪೋಸಲ್ ಬಂದಿತ್ತು, ಅವನ ಬಿ.ಎಂ.ಡಬ್ಲೂ ಕಾರು ನೋಡಿ ಒಪ್ಪಿಕೊಳ್ಳದೇ ಇರೋಕೆ ಚಾನ್ಸ್ ಇಲ್ಲ..! ಓಕೆ ಅಂದವಳು ಅವನ ಜೊತೆ ಬಾರ್, ಪಬ್ ಅಂತ ಹೊಸ ಪ್ರಪಂಚದಲ್ಲಿ ಮುಳುಗಿದ್ಲು..! ಮನೋಜ್ ಫೋನ್ ಮಾಡಿದ್ರೆ ಇವಳಿಗೆ ಇರಿಟೇಟ್ ಆಗ್ತಿತ್ತು..! ಬದುಕು ರೂಪಿಸಿದವನು ಬೇಡವಾಗಿಬಿಟ್ಟಿದ್ದ..! ಅವತ್ತು ಸಂಜೆ ಎಲ್ಲಾದ್ರೂ ಹೊರಗೆ ಹೋಗೋಣ ಅಂತ ಮನೋಜ್ ಡಿಸೈಡ್ ಮಾಡಿದ್ದ..! ಅದಕ್ಕೇ ಅವಳಿಗೆ ಹೇಳೋಣ ಅಂತ ನೂರು ಸಲ ಕಾಲ್ ಮಡಿದ್ದ, ಅವತ್ತೇ ಜ್ವರ ಅಂತ ಹೇಳಿದ್ದಕ್ಕೆ ಅವಳ ಪಿ.ಜಿ ಹತ್ತಿರ ಹೋಗಿ ಮಳೆಯಲ್ಲಿ ಗಂಟೆಗಟ್ಲೆ ಕಾದಿದ್ದ..! ಆದ್ರೆ ಅವನು ನೋಡಿದ್ದೇ ಬೇರೆ..! ಏನು ಮಾಡಬೇಕೋ ಗೊತ್ತಾಗಲಿಲ್ಲ..! ತನ್ನ ಹುಡುಗಿ ತನಗೆ ಕೈಕೊಟ್ಟಿದ್ದು ಗೊತ್ತಾಗಿಹೋಗಿತ್ತು..! ಅವಳಿಗೆ ಹೋಗಿ ಕೆನ್ನೆಗೆ ಬಾರಿಸಿ ಕೋಪ ತೋರಿಸ್ಕೋಬೇಕು ಅನ್ನಿಸ್ತು..! ಮನಸಾಗಲಿಲ್ಲ…. ಹೋಗಿ ಅವಳ ಕಾಲು ಹಿಡಿದು `ನಂಗೆ ಮೋಸ ಮಾಡ್ಬೇಡ ಅಂತ ಅಳಬೇಕು ಅನ್ನಸ್ತು’..! ಮನಸಾಗಲಿಲ್ಲ… ಮನಸ್ಸು ಬೇರೆ ಹೇಳ್ತು.. `ಮನೋಜ್, ಅವಳು ನಿನ್ನಂತಹ ಹುಡುಗನಿಗೆ ಸರಿ ಹೊಂದಲ್ಲ, ಹೋಗು ನೀನು ಅವಳನ್ನು ಪ್ರೀತಿಸೋ ಬದಲು, ನಿನ್ನ ಬದುಕು ಪ್ರೀತಿಸು..!’ ಅಷ್ಟೆ..! ಮನಸ್ಸಿನ ಮಾತು ಕೇಳಿ ಅಲ್ಲಿಂದ ಹೊರಟವನು ಮತ್ಯಾವತ್ತೂ ಅವಳಿಗೆ ಫೋನ್ ಮಾಡಲಿಲ್ಲ.. ಮೆಸೇಜ್ ಮಾಡಲಿಲ್ಲ..! ಅವಳೀಗ ಮೂರು ಹುಡುಗರನ್ನು ಬದಲಿಸಿ, ಎಲ್ಲೂ ಬದುಕು ಸಿಗದೇ, ಮನೆಯವರಿಂದಲೂ ದೂರಾಗಿ ಅತಂತ್ರವಾಗಿದ್ದಾಳೆ..! ಅತ್ತ ಅವನು, ಮನೆಯಲ್ಲಿ ತೋರಿಸಿದ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಾಗಿ ಜೀವನ ನಡೆಸ್ತಿದ್ದಾನೆ..! ಏನೂ ಇಲ್ಲದವಳನ್ನು ಅವನು ಏನೋ ಮಾಡಿದ. ಏನೋ ಆದವಳು ಅವನಿಗೆ ಮೋಸ ಮಾಡಿ ಇನ್ನೇನೋ ಆದಳು..!
ನಿಷ್ಕಲ್ಮಶ ಪ್ರೀತಿ ಸಿಕ್ಕಿದಾಗ ಅದಕ್ಕೆ ಮೋಸ ಮಾಡಬೇಡಿ..ಮೋಸ ಮಾಡಿದ್ದೇ ನಿಜವಾದ್ರೆ ನಿಮ್ಮ ಬದುಕೇ ನಿಮಗೆ ಮೋಸ ಮಾಡಿಬಿಡುತ್ತೆ..!
You may also like

ULTIMATE COLLECTIONS

-----------------orchid-a--------------------------------------------------



ಹಾಲು ತುಂಬಿದ ಹಸು ಸಾಧುವಾಗಿರುತ್ತದೆ: ಹಾಲಿಲ್ಲದ ದನ ಪುಂಡುತನ ಮಾಡುತ್ತದೆ, ||ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ, ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ|| ವಿಚಿತ್ರ ಪ್ರಪಂಚದ ಕಠೋರ ಸತ್ಯ ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ. ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ. ಅಂದರೆ ಖುಷಿಯಲ್ಲಿ ಮುಂದಿದ್ದರೆ, ದುಃಖದಲ್ಲಿ ಹಿಂದಿರುತ್ತಾರೆ. ಮೇಣದ ಬತ್ತಿ ಹಚ್ಚಿ,, ತೀರಿ ಹೋದವರ ನೆನೆಯುತ್ತಾರೆ : ಮೇಣದ ಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ. ವಾಹ್ ಎಂಥ ಪ್ರಪಂಚ! ಮನೆ ಸುಟ್ಟರೆ ವಿಮಾ ತಗೊಬಹುದು ಕನಸುಗಳು ಸುಟ್ಟರೆ ಏನು ಮಾಡೋಣ?? ಆಕಾಶದಿಂದ ಮಳೆ ಸುರಿದರೆ ಛತ್ರಿ ಹಿಡಿಬಹುದು, ಕಣ್ಣಿಂದ ಹನಿ ಸುರಿದರೆ ಏನು ಮಾಡೋಣ? ಸಿಂಹ ಘರ್ಜಿಸಿದರೆ ಓಡಿಹೋಗಬಹುದು, *ಅಹಂಕಾರ ಘರ್ಜಿಸಿದರೆ ಏನು ಮಾಡೋಣ? ಮುಳ್ಳು ಚುಚ್ಚಿದರೆ ತಗೆಯಬಹುದು, ಮಾತು ಚುಚ್ಚಿದರೆ ಏನು ಮಾಡೋಣ? ನೋವು ಆದರೆ ಔಷಧಿ ತೊಗೊಬಹುದು, ವೇದನೆ ಆದರೆ ಏನು ಮಾಡೋಣ? ಒಬ್ಬ ಒಳ್ಳೆಯ ಮಿತ್ರ ಒಂದೊಳ್ಳೆ ಔಷಧೀಯ ಹಾಗೆ ಆದರೆ ಒಂದೊಳ್ಳೆ ಗೆಳೆಯರ ಬಳಗ ಒಂದು ಪೂರ್ತಿ ಔಷಧ ಅಂಗಡಿ ಇದ್ದ ಹಾಗೆ.  ಗೆಳೆಯರನ್ನ ಗೆಳೆತನವನ್ನ ಬೆಳೆಸಿ ಪ್ರೀತಿಸಿ ಹಾಗೂ ಹರಸಿ.

----------------------------orchid-a--------------------------------------------

ತಾಯಿಯ ತ್ಯಾಗ:~
(ಇದನ್ನು ತಪ್ಪದೇ ಓದಿ,
ಮಿಸ್ ಮಾಡ್ಬೇಡಿ)

ಸ್ನೇಹಿತರೆ,
ಈ 'ತಾಯಿಯ ತ್ಯಾಗ'ದ
ದೃಷ್ಟಾ೦ತವನ್ನು ಓದಿದ ಮೇಲೆ,
ಅವಳಿಗಾಗಿ ನಿಮ್ಮ ಮುದ್ದಾದ ಮುಖದಲ್ಲಿ ಕಣ್ಣಂಚಿನಿಂದ ಒಂದೆರಡು ಮುತ್ತುಗಳು ನಿಮ್ಮ ಕೆನ್ನೆಗೆ ಜಾರೇ-ಜಾರುತ್ತವೆ.!!!

ಒಂದೂರಿನಲ್ಲಿ ಒಕ್ಕಣ್ಣ
(ಒಂದೇ ಕಣ್ಣು ಇರುವ)😉 ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ 🙇ಮಗುವಿನೊಂದಿಗೆ ವಾಸವಾಗಿದ್ದಳು.
ಪ್ರತಿ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.

ಹೀಗೆ ಕಾಲಚಕ್ರ ಉರುಳುತಿತ್ತು.
ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ ಬಳಿ
“ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು?” ಕೇಳಿದಾಗ,

ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಆ ತಾಯಿಗೆ ತನ್ನ ಮಗ
ತಾನು ಪಟ್ಟ ಕಷ್ಟ ಅವನು ಪಡದೇ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.
ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.

ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್🚲 ಕೊಡಿಸಿದ್ದೂ ಆಯ್ತು.
ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು. ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ.

ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ
“ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು.ನನ್ನ ಸಹಪಾಠಿ ವಿಧಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ. ಇಂದು ನಿನ್ನಿಂದಾಗಿ ನನಗೆ ತುಂಬಾ ಅವಮಾನವಾಯಿತು.” ಎಂದು   ಹೇಳಿಬಿಟ್ಟ.

ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾದಾನಿಸಿದಳು.

ಮಗು ಬೆಳೆದು ಕಾಲೇಜ್ ಸೇರಿದ.
ಈಗ ತನಗೆ ಬೈಕ್🏍 ಬೇಕೆಂದು ಹಠ ಮಾಡತೊಡಗಿದ.
ಕೈಯಲ್ಲಿ ನೈಯಾಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ📿 ಸರವನ್ನೂ ಮಾರಿ ಮಗನಿಗೊಂದು ಬೈಕ್🏍 ತೆಗೆದು ಕೊಟ್ಟಳು.

ಮಗ ಕಾಲೇಜ್ ಮುಗಿಸಿ ಒಂದು ಒಳ್ಳೆಯ  ಕೆಲಸಕ್ಕೆ ಸೇರಿದ.
ಒಳ್ಳೆಯ ಸಂಬಳ ಕೂಡ ಬರುತಿತ್ತು.
ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.

ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು.

ಆಗ ಮಗ ತಾನು ತನ್ನ ಕಂಪನಿಯಲ್ಲೆ ಕೆಲಸ ಮಾಡುವ💃 ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ. 

ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂದು ಅದಕ್ಕೂ ಒಪ್ಪಿಗೆ ನೀಡಿದಳು. 
ಮಗನ ಇಚ್ಛೆಯಂತೆ ಅದೇ ಹುಡುಗಿ‌ ಜತೆ ಮದುವೆ ನಡೆಯಿತು.💑

ಮೊದ ಮೊದಲು ಸರಿಯಾಗೇ ಇದ್ದ ಸೊಸೆ ಸ್ವಲ್ಪದಿನ ಕಳೆದಂತೆ ಬೇರೆ ಮನೆ ಮಾಡುವಂತೆ ತನ್ನ ಗಂಡನನ್ನು ದಿನವೂ ಪೀಡಿಸುತ್ತಿದ್ದಳು.
ಈಗಂತು ಕೈಯಲ್ಲೊಂದಷ್ಟು ಹಣವೂ ಇತ್ತು.
ಪತ್ನಿಯ ಇಷ್ಟದಂತೆ ಹೊಸ ಮನೆ ಮಾಡಿದ್ದೂ ಆಯಿತು.
ಈಗೀಗ ಸೊಸೆಗೆ ತನ್ನ ಒಕ್ಕಣ್ಣ ಅತ್ತೆ
ಗಂಡ ಹೆಂಡಿರ ನಡುವೆ ಇರುವುದು ಸರಿತೋರಲಿಲ್ಲ.
ಮತ್ತೆ ತನ್ನ ಗಂಡನ ತಲೆಗೆ ಹುಳಬಿಟ್ಟಳು.ಒಂದು ದಿನ ಮಗ ನೆಪವೊಂದನ್ನ ಹೇಳಿ ತಾಯಿಯ ವಾಸ್ತವ್ಯವನ್ನ ಹಳೇ ಮನೆಗೆ ವರ್ಗಾಯಿಸಿಬಿಟ್ಟ.

ಈಗಂತು ಆ ತಾಯಿ ಸಂಪೂರ್ಣ ಕುಸಿದೇ ಹೋದಳು.
ಮಗನ ಬೇಕುಬೇಡವನ್ನೆಲ್ಲಾ ಪೂರೈಸುವ ಬರದಲ್ಲಿ ನಯಾ ಪೈಸೆಯೂ ಕೂಡಿಟ್ಟಿರಲಿಲ್ಲ.
ಮೊದಮೊದಲು ಪ್ರತಿವಾರವೂ ಬಂದು ಒಂದಷ್ಟು ಹಣ ನೀಡಿ ಹೋಗುತಿದ್ದವ ಈಗೀಗ ಬರವುದೂ ಅಪರೂಪವಾಗಿಬಿಟ್ಟಿತು.

ಆ ತಾಯಿಗೆ ಒಂದು ಹೊತ್ತಿನ ಊಟಕ್ಕೂ ಮಗನ ಹಾದಿ ಕಾಯುವ ಸ್ಥಿತಿ ಬಂತು.

ಒಂದು ದಿನ ನೇರವಾಗಿ ಮಗನ ಮನೆಗೆ ಬಂದ ತಾಯಿಗೆ ಸೊಸೆಯ ಚುಚ್ಚು ಮಾತು ಅಪಮಾನವೇ ಬಹುಮಾನವಾಗಿತ್ತು. 

ಮನನೊಂದ ತಾಯಿ ಉಪವಾಸ ಸತ್ತರೂ ಚಿಂತೆಯಿಲ್ಲ ಮಗನ ಮನೆಗೆ ಮತ್ತೆಂದೂ ಕಾಲಿಡಲಾರೆ ಎಂದು ಮನಸ್ಸಿನಲ್ಲೇ ದೃಡ ಸಂಕಲ್ಪ ಮಾಡಿದಳು.

ನೇರವಾಗಿ ಮನಗೆ ಬಂದವಳೇ ವಿಪರೀತ ಜ್ವರದಿಂದ ಹಾಸಿಗೆ ಹಿಡಿದು ಬಿಟ್ಟಳು. ಮಗನಿಗೆ ಸೂಜಿಮೊನೆಯಷ್ಟು ನೋವಾಗಬಾರದೆಂದು ತನ್ನ ಹೃದಯದೊಳಗೆ ಕಾಪಾಡಿದ ತಾಯಿ ದಿನ ಕಳೆದಂತೆ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದಳು.

ಒಂದು ದಿನ ಆಫೀಸಿನಲ್ಲಿದ್ದ ಮಗನಿಗೆ 📞ಪೋನ್ ಕರೆಯೊಂದು ಬಂತು
“ನಿನ್ನ ತಾಯಿ ಇಂದು ಮುಂಜಾನೆ ತೀರಿ ಹೋದರು,🙉
ಚಿತೆಗೆ ಬೆಂಕಿ ಇಡುವುದಕ್ಕಾದರೂ ಬಾ” ಎಂದಷ್ಟೇ ಹೇಳಿ ಕರೆ ಕಟ್ಟ್ ಆಯಿತು.

ಸರಿ ಇದೂ ಆಗಲಿ ಮುಂದೆಂದೂ ಆ ಮುದುಕಿಯ ಕಿರಿಕಿರಿ ಇಲ್ಲವಲ್ಲಾ ಎಂದು ಎದ್ದು ನೇರವಾಗಿ ತಾಯಿಯ ಮನೆಗೆ ಹೋದ.

ಹೋಗಿ ತಾಯಿಯ ಶವ ನೋಡುತ್ತಾನೆ ಇವಳೇನಾ ನನ್ನ ಹೆತ್ತ ತಾಯಿ ಎಂಬ ಸ್ಥಿತಿಗೆ ತಲುಪಿತ್ತು ಆ ತಾಯಿಯ ದೇಹ.

ಶವದ ಕಣ್ಣಂಚಲ್ಲಿ ಇನ್ನೂ ನೀರಿತ್ತು.
ಸರಿ ಶವ-ಸಂಸ್ಕಾರ ಮುಗಿಸಿ ಮನೆಗೆ ಹೊರಟು ನಿಂತ ಮಗನಿಗೆ ನೆರೆಮನೆಯಾತ ಒಂದು✉ ಕಾಗದವನ್ನು ಕೈಗಿಟ್ಟು ಹೋದ.

ಕಾಗದ ತೆಗೆದು ನೋಡಿದ ಮಗನಿಗೆ ನೂರು ಸಿಡಿಲು ಒಂದೇ ಕ್ಷಣ ಬಡಿದಂತ ಅನುಭವವಾಯಿತು.

ಆ 📃ಕಾಗದದಲ್ಲಿ ಹೀಗೆ ಬರೆದಿತ್ತು.
“ಮಗನೇ ನಾನಿನ್ನು ಹೋಗುತ್ತೇನೆ
ಆದರೆ!! ನನ್ನ ಒಂದು ಕಣ್ಣು ಏನಾಯಿತು? ಎಂದು ಚಿಕ್ಕವನಿದ್ದಾಗ ನೀನು ಕೇಳುತ್ತಿದ್ದೆ. ಆದರೆ ಇನ್ನೂ ಚಿಕ್ಕ ಮಗುವಾಗಿದ್ದ ನಿನ್ನ ಮನಸ್ಸು ನೋಯಿಸಬಾರದೆಂದು ಏನೇನೋ ಸುಳ್ಳು ಹೇಳುತ್ತಿದ್ದೆ.
ಇಂದು ನೀನೂ ಬೆಳೆದು ದೊಡ್ಡವನಾಗಿದ್ದೀಯ.
ಸತ್ಯ ನಿನಗೂ ತಿಳಿಯಲಿ.
ನೀನು ಚಿಕ್ಕವನಿರುವಾಗ, ಆಟವಾಡುವಾಗ ಕೋಲೊಂದು ತಾಗಿ ನಿನ್ನ ಕಣ್ಣು ಹೋಗಿತ್ತು.
ನನಗೆ ಇನ್ನು ಆಗಬೇಕಿರುವುದಾದರೂ ಏನು
ತನ್ನ ಮಗನ ಜೀವನ ಹಾಳಾಗಬಾರದೆಂದು ನನ್ನ ಒಂದು ಕಣ್ಣನ್ನ ನಿನಗೆ ನೀಡಿದ್ದೆ.
ಇಂದು ನಿನಗೆ ಈ ಒಕ್ಕಣ್ಣ ತಾಯಿ ಬೇಡವಾದ್ಲು, ಪರವಾಗಿಲ್ಲ ಮಗು.
ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ.
ನನ್ನ ಆ ಕಣ್ಣಿನಲ್ಲಿ ಎಂದಿಗೂ ನೀರು ಬರಬಾರದು." ಎಂದು ಬರೆದಿತ್ತು.


ಆಗ ಮಗನಿಗೆ ಅರಿಯದಂತೆ ಕಣ್ಣಲ್ಲಿ ಧಾರಾಕಾರವಾಗಿ ನೀರಿಳಿಯಿತು. ಧಗಧಗನೆ ಉರಿಯುವ ತಾಯಿಯ‌ ಚಿತೆಯನ್ನೇ ನೋಡುತ್ತಾ ನಿಂತ ಮಗನಿಗೆ ತಾಯಿಯ‌ ಕಾಲಕೆಳಗೆ ಬಿದ್ದು ಅಳಬೇಕೆನಿಸಿತು.

ಆದರೆ ಕಾಲ ಮೀರಿತ್ತು.
ಆ ಮಹಾದಾನಿ ತಾಯಿ ಈ ಭೂಮಿಯಿಂದ ಬಹುದೂರ ಸಾಗಿ ಗಗನದಲ್ಲಿ ಮಿನುಗುವ ತಾರೆಯಂತೆ ಹೊಳೆಯುತಿದ್ದಾಳೆ.

ಆತ್ಮೀಯ ಮಿತ್ರರೇ ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ, ನೋವಿದೆ.

ಮಕ್ಕಳ ಏಳಿಗಾಗಿ ಒಬ್ಬ ತಾಯಿ ಏನೆಲ್ಲಾ ತ್ಯಾಗ ಮಾಡಬಹುದೆಂದು ಒಂದು ಚಿಕ್ಕ ಕಥೆಯ ಮೂಲಕ ವಿವರಿಸುವುದು ಅಸಾಧ್ಯ. ಆಕೆಯ ತ್ಯಾಗದ ವಣ೯ನೆಗೆ ಪದಪುಂಜಗಳು ಸಾಲಲಾರವು. ತಾಯಿಯೆಂದರೆ
ಅದು ದೇವರ ಪ್ರತಿರೂಪ ಅಲ್ಲವೇ..?


ಆಕೆಯನ್ನು ಹೀಗೇ ಒಬ್ಬರು ಕೇಳಿದರು '' ನೀವೇನು ವರ್ಕಿಂಗ್ ವುಮೆನ್ನೋ ಅಥವಾ ಬರೀ ಹೌಸ್ ವೈಫೋ?'' ಆಕೆ ಉತ್ತರಿಸಿದಳು ''ಹಾಂ... ನಾನು ಬರೀ ಹೌಸ್ ವೈಫೇ...ಆದರೆ ಇಪ್ಪತ್ತ್ನಾಲ್ಕು ಗಂಟೇನೂ ವರ್ಕ್ ಮಾಡೋ ಹೌಸ್ ವೈಫ್...ನೋಡಿ, ನಾನು ಅಮ್ಮ ನಾನು ಹೆಂಡತಿ ನಾನು ಮಗಳು ನಾನು ಸೊಸೆ ನಾನು ಅಲಾರಾಂ ಗಡಿಯಾರ ನಾನು ಅಡಿಗೆಯವಳು ನಾನು ಕಸಮುಸುರೆಯವಳು ನಾನು ಟೀಚರ್ ನಾನು ಅಕೌಂಟೆಂಟ್ ನಾನು ದಾಖಲೆಗುಮಾಸ್ತೆ ನಾನು ಬಡಿಸೋ ವೇಟರ್ ನಾನು ಆಯಾ ನಾನು ನರ್ಸ್ ನಾನು ಕೈಯಾಳು ನಾನು ಗಾರ್ಡ್ನರ್ ನಾನು ಗೂರ್ಖಾ ನಾನು ಕೌನ್ಸೆಲರ್ ನಾನು ಶಯನಭಾಗಿ ಆದರೆ ಇಷ್ಟಾದರೂ ನೋಡಿ ನನಗೆ ಸಿಎಲ್ ಇಲ್ಲ, ಇಎಲ್ ಇಲ್ಲ, ಸಂಡೇ ಇಲ್ಲ, ಹಬ್ಬದ ರಜೆ ಇಲ್ಲ , ಅಷ್ಟೇ ಅಲ್ಲ ನನಗೆ ಸಂಬಳಾನೂ ಇಲ್ಲ,,,, ಆದರೂ ಎಲ್ಲರೂ ಕೇಳ್ತಾರೆ '' ಮನೇಲಿ ಕೂತ್ಕೊಂಡ್ ಏನ್ಮಾಡ್ತಿರ್ತೀಯ ದಿನವೆಲ್ಲ'' 😰😰😰😰😰😰😰😰😰😰 ಈ ಮೆಸೇಜ್ ನ ದಯವಿಟ್ಟು ನಿಮ್ಮ ತಾಯಿ, ಅಕ್ಕಂದಿರು, ತಂಗಿ, ಹೆಂಡತಿ , ಗೆಳತಿ , ಮಗಳು ಎಲ್ಲರಿಗೂ ಕಳಿಸಿ. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽  ಈ ಸಂದೇಶವನ್ನು ಜಗತ್ತಿನ ಎಲ್ಲ ಸಂಬಳವಿರದೆ ದುಡಿಯುವ ಗೃಹಿಣಿಯರ ಪಾದಕ್ಕೆ ಅರ್ಪಿಸಿದೆ.

-------------------------orchid-a-------------------------------------------

ಎಸ್.ಆರ್.ವಲ್ಡ್೯ ಹೇಳುವಂತೆ
'ಹತ್ತು-ದೇವ'ರಿಗಿಂತ
'ಹೆತ್ತ-ತಾಯಿ' ಶ್ರೇಷ್ಠ .
'ಹೆತ್ತ-ತಾಯಿ'ಯನ್ನು
'ಸತ್ತ -ನಾಯಿ'ಯಂತೆ ನಡೆಸಿಕೊಂಡು
ಎಲ್ಲಾ ಮುಗಿದ ಮೇಲೆ
'ಅತ್ತು-ಬಾಯಿ'ಬಡೆದುಕೊಂಡರೆ,
'ಹತ್ತು-ದೇವತೆ'ಗಳೂ ಕ್ಷಮಿಸಲಾರವು.


'ಹೆತ್ತ' ತಾಯಿ
'ಸತ್ತು' ಹೋದ ಮೇಲೆ
'ಅತ್ತ'ರೇನು?
ಅವಳು ಬದುಕಿದ್ದಾಗಲೇ
'ಬತ್ತ'ದಿರಲಿ
ಅವಳ ಮೇಲಿನ ನಿಮ್ಮ ಪ್ರೀತಿಯ ಭಾವನೆ.
👏👏👏👏👏
Plz do share this

------------------------------------orchid-a------------------------------------------------------


ಎಲ್ಲರೂ ಓದಲೇ ಬೇಕಾದ ಒಂದು ಸುಂದರ ಕಥೆ..
ಇಬ್ಬರು ಬಾಲ್ಯಸ್ನೇಹಿತರು.. ಒಟ್ಟಿಗೆ ಓದಿದವರು , ಒಟ್ಟಿಗೆ ಬೆಳೆದವರು.. ಒಬ್ಬ ಧನಿಕ , ಇನ್ನೊಬ್ಬ ಬಡವ..ಬಹಳ ಕಾಲದ ನಂತರ ಭೇಟಿಯಾಗುತ್ತಾರೆ.. ಕಷ್ಟ - ಸುಖ ಮಾತನಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾರೆ..
ಧನಿಕ ಗೆಳೆಯ -
"ಜೀವನದಲ್ಲಿ ನೀನೇನೂ ಬದಲಾಗಲೇ ಇಲ್ಲವಲ್ಲ ಗೆಳೆಯ.. ಅದೇ ತೆಳ್ಳಗಿನ ದೇಹ , ಅದೇ ನಗು , ಅದೇ ಬಡತನ.. ನನ್ನನ್ನು ನೋಡು.. ಎಷ್ಟು ಬದಲಾಗಿದ್ದೇನೆ.. ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದೇನೆ.. ಮನೆ , ಕಾರು , ಸಂಪತ್ತು ಎಲ್ಲ ನನ್ನ ಬಳಿ ಇವೆ.. ನಿನ್ನ ಜೀವನವೇಕೆ ಹೀಗಾಯ್ತು...?
ಬಡವ ಗೆಳೆಯ ಹಠಾತ್ತಾಗಿ ನಿಂತ..
ಧನಿಕ ಗೆಳೆಯ - "ಏನಾಯ್ತು?"
ಬಡವ ಗೆಳೆಯ - "ಏನೋ ಶಬ್ದ ಕೇಳಿಸಿತಲ್ಲ..?"
ಧನಿಕ ಗೆಳೆಯ -
" ಓ ಅದಾ...? ನನ್ನ ಜೇಬಿನಿಂದ ನಾಣ್ಯ ಬಿದ್ದಿರಬಹುದು"
ಹುಡುಕಿದ.. ಐದು ರೂಪಾಯಿಯ ನಾಣ್ಯ ಕೆಳಗೆ ಬಿದ್ದಿತ್ತು. ಜೇಬಿಗೆ ಸೇರಿಸಿದ..
ಬಡವ ಗೆಳೆಯ ಅಲ್ಲಿಂದ ದೂರ ಹೋದ..ಏನನ್ನೋ ಹುಡುಕಿದ.. ದೊಡ್ಡ ಜೇಡದ ಬಲೆಯಲ್ಲೊಂದು ಹಕ್ಕಿಮರಿ ಸಿಕ್ಕಿ ಒದ್ದಾಡುತ್ತಿತ್ತು.. ಆತ ನಿಧಾನವಾಗಿ ಬಲೆಯಿಂದ ಬಿಡಿಸಿ , ಆಕಾಶಕ್ಕೆ ಹಾರಿಸಿದ..
ಧನಿಕಗೆಳೆಯ ಆಶ್ಚರ್ಯದಿಂದ "ಹಕ್ಕಿಯ ಧ್ವನಿ ನಿನಗೆ ಹೇಗೆ ಕೇಳಿಸಿತು..?"
ಬಡವ ಗೆಳೆಯ ಮುಗುಳ್ನಗುತ್ತಾ - " ಗೆಳೆಯ...ಇದೇ ನಮ್ಮಿಬ್ಬರ ನಡುವೆ ಇರುವ ಅಂತರ.. ನಿನಗೆ ಹಣದ ಧ್ವನಿ ಕೇಳಿಸಿತು.. ನನಗೆ ಮನದ ಧ್ವನಿ ಕೇಳಿಸಿತು.. ನಿನ್ನ ಮನ ಹಣದಾಸೆಯ ಬಲೆಯಲ್ಲಿ ಸಿಲುಕಿಕೊಂಡಿದೆ , ನನ್ನ ಮನ ಸ್ವತಂತ್ರ್ಯವಾಗಿ ಸಂತೋಷದಿಂದ ವಿಹರಿಸುತ್ತಿದೆ.. ನೀನು ಹಣದಾಸೆಯಲ್ಲಿ ಮಾನವೀಯತೆಯನ್ನೇ ಮರೆತಿದ್ದೀಯಾ.. ನಾನು ಮನದಲ್ಲಿ ಈಗಲೂ ಮಾನವೀಯತೆಯನ್ನು ಹೊಂದಿದ್ದೇನೆ.. ಮನದಲ್ಲಿ ಹಾಗೂ ಮಾನವೀಯತೆಯಲ್ಲಿರುವ ಸಂತೋಷವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವೇ..? ಈಗ ಹೇಳು ಗೆಳೆಯ..
ಯಾರು ಶ್ರೀಮಂತರು?"
ಧನಿಕಗೆಳೆಯ ಏನನ್ನೂ ಉತ್ತರಿಸಲಾಗದೇ ಸುಮ್ಮನಾದ...
ಹಣಗಳಿಕೆಯನ್ನೇ ಜೀವನದ ಪರಮಗುರಿಯನ್ನಾಗಿಸಿಕೊಂಡು , ಮಾನವೀಯತೆಯನ್ನು ಮರೆತಿರುವ ಮನುಕುಲಕ್ಕೆ ಈ ಕಥೆ ಮುಡಿಪು...
ಕೊಂಚ ಆಲೋಚಿಸಿ ನೋಡಿ●
"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"
ಕೊಂಚ ಆಲೋಚಿಸಿ ನೋಡಿ●
"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"
ಕೊಂಚ ಆಲೋಚಿಸಿ ನೋಡಿ●
"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದ
--------Orchid-a-------
ಒಂದು ಊರಿನಲ್ಲಿ 3 ಮಹಿಳೆಯರು ನೀರು ತುಂಬಿಸುತ್ತಿದ್ದರು.
ಮೊದಲನೆಯವಳ ಮಗ ಶಾಲೆಯಿಂದ ಅದೇ ದಾರಿಯಲ್ಲಿ ಹೋಗುತ್ತಿರುವಾಗ ತಾಯಿಯ ಕಡೆ ನೋಡಿದ . ಆವಾಗ ತಾಯಿ" ಅವನೆ ನನ್ನ ಮಗ,ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ"
ಸ್ವಲ್ಪ ಸಮಯದ ನಂತರ ಎರಡನೆಯವಳ ಮಗ ಅದೇ ದಾರಿಯಿಂದ ಶಾಲೆಯಿಂದ ಹಿಂತಿರುಗುವುದನ್ನು ತೋರಿಸಿ "ಅವನೆ ನನ್ನ ಮಗ, ಸಿಬಿಎಸ್ ನಲ್ಲಿ ಒದುತ್ತಿದ್ದಾನೆ"
ಅವನ ಹಿಂದಿನಿಂದ ಮೂರನೆಯವಳ ಮಗ ಕೂಡಾ ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ.ತಾಯಿಯನ್ನು ನೋಡಿ ಅವಳ ಹತ್ತಿರ ಬಂದು ನೀರಿನಿಂದ ತುಂಬಿದ ಕೊಡವನ್ನು ಹೆಗಲ ಮೇಲೆ ಮತ್ತು ಬಾಲ್ಟಿಯನ್ನು ಇನ್ನೊಂದು ಕೈಯಲ್ಲಿ ಹಿಡಿದು ತಾಯಿಯ ಕಡೆ ನೋಡಿ" ಅಮ್ಮ ಬನ್ನಿ ಮನೆಗೆ ಹೋಗುವ" ಅಂದ. ತಾಯಿ ಅವನ ಕಡೆ ಕೈ ತೋರಿಸಿ, ಸಂತೋಷದಿಂದ " ಇವನೇ ನನ್ನ ಮಗ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾನೆ" ಅಂದಳು. ಇದನ್ನು ಕೇಳಿ ಮತ್ತಿಬ್ಬರು ನಾಚಿಕೆಯಿಂದ ತಲೆ ಬಾಗಿಸಿದರು.
ಮೇಲಿನ ಕತೆಯ ತಾತ್ಪರ್ಯ  ಇಷ್ಟೆ, "ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.........
ಮೊದಲು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ ವೀದ್ಯಾವಂತರನ್ನಾಗಿ ಮಾಡಿ
------------Orchid-------------
ಪಕ್ಷಿ ಜೀವಂತವಾಗಿದ್ದಾಗ ಅದು ಇರುವೆಗಳನ್ನು ತಿನ್ನುತ್ತದೆ..,
ಪಕ್ಷಿ ಸತ್ತಾಗ ಇರುವೆಗಳು ಪಕ್ಷಿಯನ್ನು ತಿನ್ನುತ್ತವೆ..!!!
ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುತ್ತವೆ.. ಹಾಗಾಗಿ ಜೀವನದಲ್ಲಿ ಯಾರನ್ನೂ ಯಾರ ಭಾವನೆಗಳನ್ನು ಹೀಯಾಳಿಸಿ ಅಪಮೌಲ್ಯಗೊಳಿಸಬೇಡಿ.. ಜರಿದು ಮನನೋಯಿಸಬೇಡಿ.. ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ "ಕಾಲ" ನಿಮಗಿಂತಲೂ ಹೆಚ್ಚು ಶಕ್ತಿಶಾಲಿ..!! ಒಂದು ಮರ ಕೋಟ್ಯಂತರ ಬೆಂಕಿಕಡ್ಡಿಗಳನ್ನು ತಯಾರುಮಾಡಬಹುದು.., ಆದರೆ ಒಂದು ಬೆಂಕಿಕಡ್ಡಿ ಕೋಟ್ಯಂತರ ಮರಗಳನ್ನೇ ಸುಟ್ಟುಹಾಕುತ್ತದೆ. !!!!
ಒಳ್ಳೆಯವರಾಗಿರಿ
ಒಳ್ಳೆಯದನ್ನೇ ಚಿಂತಿಸಿ
ಒಳ್ಳೆಯ ಕಾರ್ಯಗಳನ್ನೆಲ್ಲಾ ಮಾಡಿ
------Orchid-a-----
ಬ್ರೆಡ್ನಲ್ಲಿ ಉಳಿಸಿದ್ದು ಬೆಣ್ಣೆಯಲ್ಲಿ ಹೋಯ್ತು!
ಬಿಸಿನೆಸ್ನಲ್ಲಿ ನಾವು ಪ್ರಾಮಾಣಿಕವಾಗಿರದೆ ಬೇರೆಯವರಿಂದ ಪ್ರಾಮಾಣಿಕತೆ ನಿರೀಕ್ಷಿಸಬಾರದು. ಎಲ್ಲೆಡೆಯಂತೆ ಕಾರ್ಪೊರೇಟ್ ಜಗತ್ತಿನಲ್ಲೂ ಕೊನೆಗೆ ಗೆಲ್ಲುವುದು ಪ್ರಾಮಾಣಿಕತೆಯೇ. ಬಿಸಿನೆಸ್ಗೆ ನೂರಾರು ಸ್ಟ್ರಾಟಜಿಗಳಿರಬಹುದು; ಆದರೆ ಪ್ರಾಮಾಣಿತೆ ಅವೆಲ್ಲಕ್ಕೂ ಮೂಲವಾಗಿರಬೇಕು.
ಅದೊಂದು ಸಣ್ಣ ಪಟ್ಟಣ. ಅಲ್ಲೊಂದು ಬೇಕರಿ. ಆ ಬೇಕರಿಯವನು ಪಕ್ಕದ ಹಳ್ಳಿಯ ಒಬ್ಬ ರೈತನಿಂದ ಬೆಣ್ಣೆ ಕೊಳ್ಳುತ್ತಿದ್ದ. ರೈತನೇ ಮನೆಯಿಂದ ಬೆಣ್ಣೆ ಅಳೆದು ತಂದುಕೊಡುತ್ತಿದ್ದ. ಸಾಮಾನ್ಯವಾಗಿ ಬೇಕರಿಯವನು ಕೊಳ್ಳುತ್ತಿದ್ದುದು ಒಂದು ಕೇಜಿ ಬೆಣ್ಣೆ. ಒಂದ ದಿನ ಬೇಕರಿಯವನಿಗೆ ಬೆಣ್ಣೆಯ ತೂಕದ ಬಗ್ಗೆ ಅನುಮಾನ ಬಂತು. ತೂಗಿ ನೋಡಿದ. 900 ಗ್ರಾಮ್ ಮಾತ್ರ ಇತ್ತು. ಮತ್ತೆರಡು ಚಾನ್ಸ್ ಕೊಟ್ಟು ನೋಡೋಣ ಎಂದು ಸುಮ್ಮನಾದ. ಆ ಎರಡು ಸಲವೂ 900 ಗ್ರಾಮ್ ಮಾತ್ರ ಇತ್ತು. ಎಷ್ಟು ದಿನದಿಂದ ರೈತ ಹೀಗೆ ಮೋಸ ಮಾಡುತ್ತಿದ್ದಾನೋ ಗೊತ್ತಿಲ್ಲ ಎಂದು ಸಿಟ್ಟುಗೊಂಡ ಅವನು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು ರೈತನನ್ನು ಅರೆಸ್ಟ್ ಮಾಡಿಸಿದ. ಮರುದಿನ ರೈತನನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ವಿಚಾರಣೆಯ ವೇಳೆ ಜಡ್ಜ್ ಕೇಳಿದರು: ನಿನ್ನ ಮನೆಯಲ್ಲಿ ತಕ್ಕಡಿ ಇದೆಯಲ್ಲವೇ? "ಇದೆ. ಆದ್ರೆ ತೂಕದ ಕಲ್ಲು ಇಲ್ಲ ಮಹಾಸ್ವಾಮಿ.' "ಹಾಗಾದರೆ ಬೆಣ್ಣೆ ಮಾರುವಾಗ ತೂಕ ಹೇಗೆ ಮಾಡುತ್ತೀಯೆ?' "ನಮ್ಮನೆಯಲ್ಲಿ ಇರೋದು ಎರಡೇ ಎಮ್ಮೆ ಮಹಾಸ್ವಾಮಿ. ಹಾಗಾಗಿ ಬಹಳ ಬೆಣ್ಣೆಯೇನೂ .
ಸಿಗೋದಿಲ್ಲ. ಈ ಬೇಕರಿಗೆ ಕೊಡುವಷ್ಟು ಮಾತ್ರ ಸಿಗುತ್ತೆ. ನಾನು ಬ್ರೆಡ್ ಕೊಳ್ಳೋದು ಇದೇ ಬೇಕರಿಯಿಂದಲೇ. ಒಂದು ಪ್ಯಾಕೆಟ್ ಬ್ರೆಡ್ 500 ಗ್ರಾಮ್ ಇರುತ್ತೆ ಅಂತ ಬೇಕರಿಯವನು ಹೇಳಿದ್ದಾನೆ. ಅದನ್ನೇ ತಕ್ಕಡಿಯಲ್ಲಿಟ್ಟು ಬೆಣ್ಣೆ ತೂಗುತ್ತೇನೆ. ಎರಡು ಸಲ ತೂಗಿದರೆ 1 ಕೇಜಿ ಇರುತ್ತೆ ಅಂತ ನನ್ನ ಲೆಕ್ಕ. ಈಗ ಮೋಸವಾಗಿದೆ ಅಂದ್ರೆ ನಾನೇನು ಮಾಡಲಿ?' !!

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

1 comment:

  1. ಶುಭ ದಿನ,

    ನಾವು ಕಾನೂನುಬದ್ಧ ಮತ್ತು ಗೌರವಾನ್ವಿತ ಹಣದ ಸಾಲಗಾರರಾಗಿದ್ದೇವೆ. ಹಣಕಾಸಿನ ಬೆಂಬಲ ಅಗತ್ಯವಿರುವ ವ್ಯಕ್ತಿಗಳಿಗೆ ನಾವು ಹಣವನ್ನು ಸಾಲವಾಗಿ ನೀಡುತ್ತೇವೆ, ಕೆಟ್ಟ ಕ್ರೆಡಿಟ್ ಹೊಂದಿರುವ ಅಥವಾ ವ್ಯವಹಾರದ ಮೇಲೆ ಹೂಡಿಕೆ ಮಾಡಲು ತಮ್ಮ ಮಸೂದೆಗಳನ್ನು ಪಾವತಿಸಲು ಹಣದ ಅಗತ್ಯವಿರುವ ಜನರಿಗೆ ನಾವು ಸಾಲಗಳನ್ನು ನೀಡುತ್ತೇವೆ. ಆದ್ದರಿಂದ ನೀವು ತುರ್ತು ಸಾಲಕ್ಕಾಗಿ ಹುಡುಕುತ್ತೀರಾ? ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನೀವು ಕಡಿಮೆ ಬಡ್ಡಿ ದರದಲ್ಲಿ 2% ನಷ್ಟು ಸಾಲವನ್ನು ನೀಡುತ್ತೇವೆ ಏಕೆಂದರೆ ನೀವು ಸಾಲದ ಅವಶ್ಯಕತೆಯಿದ್ದರೆ ನೀವು ಈ ಇಮೇಲ್ ವಿಳಾಸದ ಮೂಲಕ ನಮ್ಮನ್ನು ಸಂಪರ್ಕಿಸುವ ನಿರೀಕ್ಷೆಯಿದೆ: mobilfunding1999@gmail.com

    ಸಾಲ ಅನ್ವಯಿಸುವಿಕೆ ಮಾಹಿತಿ ಅಗತ್ಯವಿದೆ:

    1) ಪೂರ್ಣ ಹೆಸರುಗಳು: ............
    2) ಲಿಂಗ: .................
    3) ವಯಸ್ಸು: ........................
    4) ದೇಶ: .................
    5) ದೂರವಾಣಿ ಸಂಖ್ಯೆ: ........
    6) ಉದ್ಯೋಗ: ..............
    7) ಮಾಸಿಕ ಆದಾಯ: ......
    8) ಸಾಲ ಪ್ರಮಾಣದ ಅಗತ್ಯವಿದೆ: .....
    9) ಸಾಲ ಅವಧಿ: ...............
    10) ಸಾಲದ ಉದ್ದೇಶ: ...........

    ಧನ್ಯವಾದಗಳು

    ReplyDelete