Scholarship Details




ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್ ಕುಟುಂಬದವರು ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ "ಕಡಿಮೆ ಧರದಲ್ಲಿ ಗುಣಮಟ್ಟದ ತರಬೇತಿ"ಯನ್ನು ಕನ್ನಡಿಗರಿಗೆ ನೀಡುವ ಸಲುವಾಗಿ " ಡಾ. ರಾಜ್ ಕುಮಾರ್ ಅಕಾಡಮಿ ಫಾರ್ ಸಿವಿಲ್ ಸರ್ವೀಸ್ " ಎಂಬ ಸಂಸ್ಥೆ ಯನ್ನು ತೆರೆದಿದ್ದಾರೆ. ಅಕಾಡೆಮಿಯು ಪೆಬ್ರವರಿ ಮೊದಲ ವಾರದಲ್ಲಿ ಅಡ್ಮಿಷನ್ ಪ್ರಕ್ರಿಯೆಯನ್ನು ಪ್ರಾರಂಬಿಸುತ್ತಿದ್ದು ಮತ್ತು ಪೆಬ್ರವರಿ ಮೂರನೇ ವಾರದಿಂದ ತರಗತಿಗಳನ್ನು ಪ್ರಾರಂಭಮಾಡುವ ಯೋಜನೆ ಮಾಡಲಾಗಿದೆ. ಅಕಾಡೆಮಿಯ ವೈಶಿಷ್ಟ್ಯ ತೆಗಳೆಂದರೆ. ಸುಮಾರು 150 ಕ್ಕೂ ಹೆಚ್ಚು UPSC ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿಯಾಗಿ ತಮ್ಮ ಶ್ರೀಮಂತ ಅನುಭವ ಹಾಗು ಜ್ಙಾನವನ್ನು ತಮಗೆ ವೈಶಿಷ್ಟ್ಯ ವಿರುವ ವಿಷಯಗಳ ಮೇಲೆ ಹಂಚಿಕೊಳ್ಳಲಿದ್ದಾರೆ. ಕನ್ನಡ ಸಾಹಿತ್ಯ ದಂತಹ ಐಚ್ಛಿಕ ವಿಷಯಯವನ್ನು ಈಗಾಗಲೇ ದೆಹಲಿಯ ವಾಜಿರಾಮ್ ನಲ್ಲಿ ಕನ್ನಡವನ್ನು ಬೋಧಿಸುತ್ತಿರುವ ನುರಿತ ಅನುಭವವುಳ್ಳ ಡಾ. ಶಿವಕುಮಾರ್ ಹಾಗು ಕನ್ನಡದ ಪ್ರಖ್ಯಾತ ವಿದ್ವಾಂಸರು ಹಾಗು ವಿಮರ್ಶಕರಾದ ಡಾ. ಎಚ್ ಎಸ್. ರಾಘವೇಂದ್ರರಾವ್ ಮತ್ತು ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು UPSC ಪರೀಕ್ಷೆ ಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸುವುದರೊಂದಿಗೆ ನಾಲ್ಕು ಬಾರಿ ಯಶಸ್ಸು ಪಡೆದಿರುವ ಶ್ರೀ ಅಶ್ವಿನ್ ಗೌಡ ಮತ್ತು ಇತರ ಕನ್ನಡದ ವಿದ್ವಾಂಸರು ಗೆಸ್ಟ್ ಪ್ಯಾಕಲ್ಟಿಯಾಗಿ ವಿಷಯವನ್ನು ಬೋದಿಸಲಿದ್ದಾರೆ. ಹಾಗೆಯೇ ನೀವು ಬರೆದ ಟೆಸ್ಟ್ ಪೇಪರ್ ಗಳನ್ನು ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಗಳಿಸಿರುವ ಅಧಿಕಾರಿಗಳ ತಂಡ ಮೌಲ್ಯ ಮಾಪನ ಮಾಡುವುದರ ಮೂಲಕ ನಿಮ್ಮ ಉತ್ತರಗಳನ್ನು ಸರಿಪಡಿಸಲಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವೈಶಿಷ್ಟ್ಯ ವಿರುವ ಪರಿಣಿತ ಪ್ರಾಧ್ಯಾಪಕರು ನಿಮ್ಮ ಕನ್ನಡಸಾಹಿತ್ಯದ ಮೇಲಿನ ಜ್ಞಾನವನ್ನು ವಿಸ್ತಾರ ಗೊಳಿಸಲಿದ್ದಾರೆ ಹಾಗು ಪ್ರತೀ ಐದು ಅಭ್ಯರ್ಥಿಗಳಿಗೆ ಮೆಂಟರ್ಶಿಪ್ ಸೇವೆಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅರ್ಥಶಾಸ್ತ್ರ ದಂತಹ ವಿಷಯವನ್ನು Indian Economy Service ಐದು ಮಂದಿ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಬೋದಿಸಲಿದ್ದಾರೆ. International Relations ನಂತಹ ವಿಷಯವನ್ನು ಆರು ಜನ Indian Foreign Service ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಭೋದಿಸಿದ್ದಾರೆ. ಹೀಗೆ ಹಲವಾರು ವಿಷಯಗಳ ಮೇಲೆ ಸುಮಾರು ಈಗಾಗಲೇ UPSC ಯಲ್ಲಿ ಯಶಸ್ಸು ಗಳಿಸಿರವ 150 ಕ್ಕೂ ಹೆಚ್ಚು ಅನುಭವವುಳ್ಳ, ನುರಿತ ಅಧಿಕಾರಿಗಳು ನಿಮಗೆ ಮಾರ್ಗದರ್ಶನ, ಮೌಲ್ಯಮಾಪನ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಬೋದನೆ ,ಮೆಂಟರ್ಶಿಪ್, ಮುಂತಾದ ವಿಷಯಗಳ ಮೇಲೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ. ಡಾ. ರಾಜ್ ಕುಮಾರ್ IAS ಅಕಾಡೆಮಿಯು ಅದರದೇ ಆದ 24×7 ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ್ದು UPSC ಪರೀಕ್ಷೆ ಗಳಿಗೆ ಸಂಬಂದಪಟ್ಟ ಎಲ್ಲಾ ರೀತಿಯ Study metierial ಗಳನ್ನು ಪೂರೈಸಲಾಗುವುದು. ಅಕಾಡೆಮಿ ಅದರದ್ದೇ ಆದ ವೆಬ್ ಸೈಟ್ ಹೊಂದಿದ್ದು ಡೈಲಿ ಕರೆಂಟ್ ಅಫೆರ್ಸ್ ಮುಂತಾದ ಸೇವೆಗಳನ್ನು ಒದಗಿಸಲಾಗುವುದು. ಈಗಾಗಲೇ ಮೂರು ನಾಲ್ಕು ಬಾರಿ UPSC Interview ಕೊಟ್ಟಿರುವ 20 ಜನರ ಅನುಭವವುಳ್ಳ , ನುರಿತ ತಂಡ ಪ್ರತೀನಿತ್ಯ ನಿಮ್ಮ ಸಂಶಯಗಳಿಗೆ ಮಾರ್ಗದರ್ಶನ ನೀಡುವ, ವಿಷಯಗಳನ್ನು ಬೋದಿಸುವ , ನೋಟ್ಸ್ ತಾಯಾರಿಸುವ ಹಾಗು ಇನ್ನಿತರೆ ಸೇವೆಗಳಲ್ಲಿ ಲಭ್ಯವಿರುತ್ತಾರೆ. DRACS ( Dr Rajkumar Academy For Civil Services) ಸಂಸ್ಥೆಯುಹನ ಕರ್ನಾಟಕದಲ್ಲಿ ಏಕಕಾಲದಲ್ಲಿ ಪರೀಕ್ಷೆಯನ್ನು ಏರ್ಪಡಿಸುವುದರ ಮುಖಾಂತರ ಹಾಗು ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿದ 'ಬಡ,ಪ್ರತಿಭಾವಂತ" ಅಭ್ಯರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಯನ್ನು ರೂಪಿಸಲಾಗಿದೆ. ಕಾರಣ ಅಕಾಡೆಮಿಯ ಮೂಲ ಉದ್ದೇಶ "Affordable fee ನಲ್ಲಿ ಗುಣಮಟ್ಟದ ತರಭೇತಿ" ಕನ್ನಡದ ನೆಲದಲ್ಲಿ ದೊರೆಯಬೇಕು ಹಾಗು ದೆಹಲಿಯಂತಹ ನಗರಗಳಿಗೆ ಹೋಗಿ ದುಬಾರಿ ವೆಚ್ಚವನ್ನು ಭರಿಸಲಾಗದ ಒಬ್ಬ ಬಡ ರೈತ,ಕಾರ್ಮಿಕ ಹಾಗು ಹಳ್ಳಿ ಗಾಡಿನ ಪ್ರತಿಭಾವಂತ ಅಭ್ಯರ್ಥಿಗಳೂ ಕೇಂದ್ರದ ನಾಗರೀಕ ಸೇವೆಗಳಿಗೆ ಸೇರಬೇಕು ಎಂಬುದು ಆಶಯವಾಗಿರುತ್ತದೆ. ದೊಡ್ಮನೆ ಸಂಸ್ಥೆ ಯಿಂದ ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದ ವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ IAS ತರಭೇತಿ ಸಂಸ್ಥೆಯನ್ನು ತೆರೆಯುತ್ತಿರುವುದರಿಂದ ಸಾವಿರಾರು IAS ಆಕಾಂಕ್ಷಿಗಳಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇಂದ್ರ ವಾಗಬೇಕು ಎಂಬುದೇ ಅಕಾಡೆಮಿಯ ಸದುದ್ದೇಶ. ಸ್ನೆಹಿತರೇ ಮಾಹಿತಿಯನ್ನು ಸಾದ್ಯವಾದಷ್ಟು ಷೇರ್ ಮಾಡುವುದರ ಮೂಲಕ ಹೆಚ್ಚು ಹೆಚ್ಚು IAS ಆಕಾಂಕ್ಷಿಗಳಿಗೆ ತಲುಪುವಂತೆ ಮಾಡಿ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ "ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ" ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ,ವೆಬ್ಸೈಟ್, ಮೇಲ್ ವಿಳಾಸ ಕೆಳಗಿನಂತಿದೆ. 9108448444 9108449444 www.dracs.in contact.dracs@gmail.com

-------------------------ORCHID--------------------------------------------


ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ ಆಗಸ್ಟ್ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗಿದೆ.
1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in
೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ
www.sw.kar.nic.in
೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in
೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development) ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ -
www.kar.nic.in/pue
೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org
೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ -
www.kar.nic.in/pue/
೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ -
www.kar.nic.in/pue
೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ -
www.kar.nic.in/pue
೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) -
www. kar.nic.in/pue
೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ –
www. kar.nic.in/pue
೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ ವೀಪ್ರೊ ಅವರ ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org
You may also like
ULTIMATE COLLECTIONS

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment