CUTE KANNADA POEMS

☝CUTE KANNADA POEMS
☝



ಧರಣಿ ಮಂಡಲ ಮಧ್ಯದೊಳಗೆ ಇಂಟರ್ ನೆಟ್ಟಿನ ಕಾಡಿನೊಳಗೆ ಮೊಬೈಲ್ ಎಂಬಾ ಮರದ ಕೆಳಗೆ ಗೆಳೆಯರಾ ಈ ಬಳಗವು..,! ಕೆಲವೇ ಕೆಲವು ಗ್ರಾಮದೊಳಗೆ ಇರುವ ಗೆಳೆಯರ ಸ್ನೇಹದೊಳಗೆ ವಾಟ್ಸಾಪ್ ಎಂಬ ಗ್ರೂಪಿನೊಳಗೇ ಇರುವ ಗೆಳೆಯರ ಕಥೆ ಇದು..! ವಿವಿಧ ರೀತಿಯ ವಿವಿಧ ದೃಷ್ಠಿಯ ವಿವಿಧ ಧರ್ಮದ ವಿವಿಧ ಜಾತಿಯ ವಿವಿಧ ಪಕ್ಷ ವಿವಿಧ ಅಭಿರುಚಿ ಇರುವ ಗೆಳೆಯರ ಗ್ರೂಪಿದೂ.! ವಿಷಯ ಸಿಕ್ಕರೆ ಅದುವೇ ಬ್ರೇಕಿಂಗ್ ಇಲ್ಲದಿದ್ದರೆ ಗುಡ್ ನೈಟ್ ಮಾರ್ನಿಂಗ್ ನೆಟ್ಟು ಇದ್ದರೆ ಸದಾ ಚಾಟಿಂಗ್ ನಮ್ಮ ಗೆಳೆಯರ ಇನ್ವಾಲಿಂಗೂ.! ಅಣ್ಣಗಳಿರಾ ಅಕ್ಕಗಳಿರಾ ಗ್ರೂಪಿನೊಳಗಿನ ಬಂಧುಗಳಿರಾ ಮೆಸೇಜ್ ಮಾಡುತ ಮಾತನಾಡಲು ಸೇರಿಕೊಳ್ಳಿರಿ ಎಲ್ಲರೂ...
----------------------------------------------------------------------------------------------------------------------------------------



ಈ ಕವಿತೆ ಬರೆದ ಅನಾಮಿಕನಿಗೆ ಒಂದು ಸಲಾಂ. ............ ಉಗ್ರರ ಗುಂಡಿನಿಂದ ಸತ್ತ ಸೈನಿಕನೊಬ್ಬ ಕೊನೆಯುಸಿರುಳಿಯುವ ಮುನ್ನ ತನ್ನ ಗೆಳೆಯನಿಗೆ ಬರೆದದ್ದು... ಮನೆಗೆ ಹೋಗಿ ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ಗೆಳೆಯ ನನ್ನವರ ಹೃದಯಗಳು ಒಡೆದಾವು. ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ ಡುಂಡಿರಾಜರ ಹನಿಗವನ ಮಳೆ!!! 😃😃⛈🌧 😀😀ಬ್ಯಾಂಕಿನಲ್ಲಿ 😀😀 ಕ್ಯಾಶ್ ಕೌಂಟರಿನ ಚೆಲುವೆಯ ಸೌಂದರ್ಯದತ್ತ ಹರಿದು ನೋಟ, ಗಮನಿಸಲಿಲ್ಲ ಅವಳು ಕೊಟ್ಟ ಹರಿದ ನೋಟ! 😂😂😂😂 😀😀ಪತ್ರೆ 😀😀 ಶನಿದೇವರಿಗೆ ಶಮೀ ಪತ್ರೆ ವಿಷ್ಣುವಿಗೆ ತುಳಸಿ ಪತ್ರೆ ಈಶ್ವರನಿಗೆ ಪ್ರಿಯವಂತೆ ಬಿಲ್ವ ಪತ್ರೆ ಯಮನಿಗೆ ಸರಕಾರಿ ಆಸ್-ಪತ್ರೆ 😉😀😀 😀😀ಅವಶ್ಯ 😀😀 ನದಿ ದಾಟಲು ತೆಪ್ಪ ಇರಬೇಕು. ಸಂಸಾರ ಶರಧಿ ದಾಟಲು ತೆಪ್ಪಗಿರಬೇಕು 😷🤐😜 😀😀ಚಿಂತೆ 😀😀 ಬಡವರಿಗೆ ಸದಾ ಹೊಟ್ಟೆ ಹೊರೆವ ಚಿಂತೆ. ಶ್ರೀಮಂತರಿಗೆ ಹೊಟ್ಟೆ ಹೊರುವ ಚಿಂತೆ.😂 😀😀ಅಧ್ಯಕ್ಷ ಭಾಷಣ 😀😀 ಅದ್ಭುತವಾಗಿತ್ತು ಅಧ್ಯಕ್ಷರ ಭಾಷಣ ವಿಷಯ, ಶೈಲಿ, ಭಾಷೆ ಎಲ್ಲವೂ ಚೆನ್ನ. ಆದರೂ ನೋಡಬೇಕಾಗಿತ್ತು ಒಮ್ಮೆಯಾದರೂ ತಮ್ಮ ವಾಚನ್ನ😂😂😂 😀😀ಭಾಷಣ 😀😀 ಆರಂಭದಲ್ಲಿ ಹೇಳುತ್ತಾರೆ ಎರಡೇ ಎರಡು ಮಾತು. ಮುಗಿಸುವಾಗ ಆಗುವುದೇ ಬೇರೆ ಎರಡೂ ಕಿವಿ ತೂತು! 😂😂 😀😀ನುಡಿದರೆ 😀😀 ಗೆಳೆಯಾ ಒಪ್ಪಿದೆ, ನೀನು ನುಡಿದರೆ ಮುತ್ತಿನ ಹಾರದಂತೆ. ಆದರೂ ತುಸು ಎಚ್ಚರ ವಹಿಸು ಎಂಜಲು ಹಾರದಂತೆ! 😁😂 😀😀ಆದರೂ 😀😀 ವಯಸ್ಸಾದರೂ ಹೆಂಗಸರು ಗಂಡಸರನ್ನು ಕಂಡರೆ ನಾಚ್ಕೊತಾರೆ. ಗಂಡಸರು ಬೋಳು ತಲೆ ಬಾಚ್ಕೋತಾರೆ !😜😀😀 ಮರೆಯಲು ಯತ್ನಿಸಿದರೂ ಮತ್ತೆ ಮತ್ತೆ ನೆನಪಾಗುವುದು ಮಾಜಿ ಪ್ರೇಯಸಿಯ ಸವಿನುಡಿ ಚೀಟಿಯಲ್ಲಿ ಬರೆದಿಟ್ಟರೂ ಮರೆತು ಹೋಯಿತು ಮಡದಿ ತರಲು ಹೇಳಿದ್ದ ಕಾಫಿಪುಡಿ. .!!!
---------------------------------------------------------------------------------------------------------------------------------------------

ಉರಿಯುತ್ತಿರುವ ದೀಪವನು ಆರಿಸಿಬಿಡು ಆದರೂ ಅರ್ಥವಾಗಲಿಲ್ಲವೆಂದರೆ ನಿನ್ನ ಕಣ್ಣಲ್ಲಿ ಎರಡು ಹನಿ ಸುರಿಸಿಬಿಡು. ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು ಆದರೂ ಅರ್ಥವಾಗಲಿಲ್ಲವೆಂದರೆ ಅವರ ಊರುಗೋಲನ್ನೇ ಮುರಿದುಬಿಡು. ನನ್ನ ತಂಗಿ ನನ್ನ ಬಗ್ಗೆ ಕೇಳಿದರೆ ಬರಿದಾದ ಕೈಯ ಮಣಿಕಟ್ಟ ತೋರಿಸು, ಆದರೂ ಅರ್ಥವಾಗಲಿಲ್ಲವೆಂದರೆ ರಕ್ತ ಸಿಕ್ತವಾದ ಈ ರಾಖಿಯನು ಮುಂದಿರಿಸು. ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ ನಾ ಬರುತಿದ್ದ ಬರಿದಾದ ದಾರಿ ತೋರಿಸು, ಆದರೂ ಅರ್ಥವಾಗಲಿಲ್ಲವೆಂದರೆ ಅವನ ಮುಖವನ್ನೊಮ್ಮೆ ಎದೆಗವಚಿ ಸಂತೈಸು. ನನ್ನ ಹಂಡತಿ ನನ್ನ ಬಗ್ಗೆ ಕೇಳಿದರೆ ತಲೆ ತಗ್ಗಿಸಿ ಒಂದು ದೀರ್ಘ ನಿಟ್ಟುಸಿರ ಬಿಡು, ಆದರೂ ಅರ್ಥವಾಗಲಿಲ್ಲವೆಂದರೆ ಅವಳ ಕಾಲಿಗೆ ಬಿದ್ದು, ಕಾಲುಂಗರ ತೆಗೆದು ಬಿಡು. ನನ್ನ ಮಗಳು ನನ್ನ ಬಗ್ಗೆ ಕೇಳಿದರೆ ಅವಳ ಹಣೆಗೊಂದು ಹೂವ್ ಮುತ್ತನಿಡು, ಆದರೂ ಅರ್ಥವಾಗಲಿಲ್ಲವೆಂದರೆ ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತುಬಿಡು. ಮನೆಗೆ ಹೋಗಿ ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ಗೆಳೆಯ ನನ್ನವರ ಹೃದಯಗಳು ಒಡೆದಾವು. 
Jai hind ಎಂತಹ ಅರ್ಥಪೂರ್ಣ ಕವನ ಅಲ್ವ...ನನಗೆ ಇಷ್ಟ ಆಯ್ತು...ಶೇರ್ ಮಾಡ್ತೆ ....
----------------------------------orchid-a-----------------------------------------------------
ಹೀಗೂಂದು thought ಬಂತು ....
ಗರ್ಭದಲ್ಲಿರುವ ಮಗುವಿನಿಂದ ಅಮ್ಮನಿಗೂಂದು  request letter....
ಮುದ್ದಿನ ಅಮ್ಮ/Dear motherboard😊😊,
Doctor ಅಂಕಲ್ ಮೊನ್ನೆ  ನಿಂಗೆ  TABLET ತೊಗೊಳಿ ಅಂದಾಗ ನಾನೆಲ್ಲೋ Samsung tabletooo, Sony tabletoo ಬರೆದಿದ್ದಾರೇ ಅಂದ್ಕೂಂಡಿದ್ದೆ, ಡಬ್ಬ Doctoru ಯಾವುದೋ vitamin tablet ಕೊಟ್ಟಿದ್ದಾರೆ😠😠 .ಛೇ!! ನೀನಾದರು ಆ Brazil aunti ಥರ ಒಂದಾದರು mobile phone ನುಂಗಬಾರದ???
PLEASE ಬೇಗ ಒಂದು  phone ನುಂಗಮ್ಮ.  9 months ಒಬ್ಬನೇ ಒಳಗೆ ಇರಬೇಕು😟, ನಂಗೆ  ತುಂಬಾ bore ಆಗುತ್ತೆ😞. Doctor uncle scan ಮಾಡಿ  report ಕೊಡಕ್ ಮುಂಚೆ ನಾನೇ  selfies Click ಮಾಡಿ whatsapp ಮಾಡ್ತೀನಿ, ವಾರ ವಾರ ನನ್ನ status update ಮಾಡ್ತೀನಿ, Daddy ನೂ tag ಮಾಡ್ತಿನಿ. Boreಆದಾಗ Honey singh uncle songs ನ download ಮಾಡಿ ಕೇಳ್ತಿನಿ, We are linked-in amma, we are umbilically connected.
ಅಮ್ಮ IIT ಗೆಲ್ಲಾ ಹೋಗ್ಬೇಕಾದ್ರೆ ತುಂಬ ಬೇಗ coaching ತೊಗೊಬೇಕಂತೆ, ಬೇಗ ಬೇಗ lessons update ಮಾಡು ಇಲ್ಲಿಂದ್ಲೇ ಓದಿ, homework ಮಾಡಿ ನಿನ್ನ timeline ನಲ್ಲಿ  post ಮಾಡ್ತೀನಿ, comment ಮಾಡು.
ಅಮ್ಮ ಅಮ್ಮ Acidity ಆಗೋ ಅಂತದ್ದು ಏನೂ ತಿನ್ನಬೇಡಮ್ಮ, ನಿನ್ನ ಹೊಟ್ಟೆ ಒಳಗಿಂದ ಬರೋ  soundu ನಾನು temple run ಆಡೋವಾಗ disturbಮಾಡತ್ತೆ.

Laaast request ಅಮ್ಮ.....ಎಲ್ಲಾದರೂ ಇರು ಎಂತಾದರು  ಇರು ಒಟ್ಟಿನಲ್ಲಿ signal ಸಿಗೋಕಡೆ ಇರು.😂😂

Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment